ಕಟಪಾಡಿ: ಸುಮಾರು 20ಲಕ್ಷ ರೂ. ವೆಚ್ಚದಲ್ಲಿ ಜೀಣೋದ್ಧಾರಗೊಳ್ಳಲಿರುವ ಕಾರಣಿಕ ಶಕ್ತಿಯ ಉದ್ಯಾವರ ಅಂಕುದ್ರು ಶ್ರೀ ಬಬ್ಬರ್ಯ ಮತ್ತು ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ದೈವಸ್ಥಾನಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಫೆ. 11ಕ್ಕೆ ಜರಗಿತು.
ಪುರಾತನ ಕಾಲದಿಂದಲೂ ಆರಾಧನೆಗೊಳಪಟ್ಟ ಈ ದೈವಸ್ಥಾನವು ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಶ್ರೀ ಬಬ್ಬರ್ಯ ಮತ್ತು ಶ್ರೀ ಬಬ್ಬುಸ್ವಾಮಿ ಜತೆಯಾಗಿ ನೆಲೆನಿಂತಿರುವ ಅಂಕುದ್ರು ಗ್ರಾಮದ ಮೂಡು ಬದಿಯಲ್ಲಿ ಮೂಡುಮುಖದ ಅಪರೂಪದ ಸಾನಿಧ್ಯವಾಗಿ ಗುರುತಿಸಲ್ಪಟ್ಟಿದೆ.
ಹಿಂದಿನ ಕಾಲದಿಂದಲೂ ಪಡುಮನೆ ಮತ್ತು ಮೂಡುಮನೆಗಳ ನೇತೃತ್ವದಲ್ಲಿ ಮುನ್ನಡೆದುಕೊಂಡು ಬಂದಿದ್ದು, ಅಜೀರ್ಣಗೊಂಡಿದ್ದ ದೈವದ ಗುಡಿಗಳ ಜೀರ್ಣೋದ್ಧಾರ ನಡೆಸಿ ಹಿಂದಿನ ವೈಭವವನ್ನು ಮರುಸ್ಥಾಪಿಸುವ ಕೆಲಸ ಕಾರ್ಯ ಶ್ರದ್ಧಾ ಭಕ್ತಿಯಿಂದ ಕೈಗೊಳ್ಳಲಾಗುತ್ತಿದೆ.
ಉದ್ಯಾವರ ಮಹತೋಭಾರ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಅರ್ಚಕ ವೇ| ಮೂ| ರಂಗನಾಥ್ ಭಟ್ ಅವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮೂಡುಮನೆ ಮಿಥೇಶ್ ಸುವರ್ಣ ಅಂಕುದ್ರು, ಕಾರ್ಯದರ್ಶಿ ಬಾಲಕೃಷ್ಣ, ಕೋಶಾಧಿಕಾರಿ ತಿಲಕ್ರಾಜ್, ಪಡುಮನೆ ಪ್ರಭಾಕರ ಕೋಟ್ಯಾನ್, ಬೊಮ್ಮು ಗುರಿಕಾರ, ದೈವಸ್ಥಾನದ ಮದ್ಯಸ್ಥ ರಾಮ ಅಂಕುದ್ರು, ಉದ್ಯಾವರ ಪಟೇಲ್ ಯತಿರಾಜ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ತಾ.ಪಂ. ಸದಸ್ಯೆ ರಜನಿ ಆರ್. ಅಂಚನ್, ಗ್ರಾ.ಪಂ. ಅಧ್ಯಕ್ಷೆ ಸುಗಂಧಿಶೇಖರ್, ಬಿಲ್ಲವ ಮಹಾಜನ ಸಂಘದ ಅಧ್ಯಕ್ಷ ಪ್ರತಾಪ್ ಕುಮಾರ್, ಕೇದಾರ್ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶೇಖರ್ ಕೋಟ್ಯಾನ್, ಸುಕುಮಾರ್ ಅಂಕುದ್ರು, ಜಿತೇಂದ್ರ ಶೆಟ್ಟಿ, ದಿವಾಕರ್ ಬೊಳ್ಜೆ, ಗಿರೀಶ್ ಸುವರ್ಣ, ಲಕ್ಷ್ಮಣ್, ವಿಜಯರಾಜ್ ಹೆಗ್ಡೆ, ವಿಜಯ ಬಂಗೇರ ಪಿತ್ರೋಡಿ, ನಾರಾಯಣ ಪೂಜಾರಿ, ವಿಜಯ ಉಪ್ಪುಗುಡ್ಡೆ, ಶುಭಕರ, ಪ್ರಸಾದ್, ಗಿರೀಶ್ ಕುಮಾರ್, ದಿನೇಶ್ ಉಪ್ಪುಗುಡ್ಡೆ, ಸುರೇಶ್, ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.