Home ಧಾರ್ಮಿಕ ಸುದ್ದಿ ಮಣಿಪುರ: ಆನೆಗುಂದಿ ಶ್ರೀಗಳ ಸೀಮೋಲ್ಲಂಘನ

ಮಣಿಪುರ: ಆನೆಗುಂದಿ ಶ್ರೀಗಳ ಸೀಮೋಲ್ಲಂಘನ

285
0
SHARE

ಕಟಪಾಡಿ: ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಗಳವರ 15ನೇ ಚಾತುರ್ಮಾಸ್ಯ ವ್ರತಾಚರಣೆಯ ಸಮಾರೋಪದ ಅಂಗ ವಾಗಿ ಸೀಮೋಲ್ಲಂಘನವು ಕಟಪಾಡಿ ಬಳಿಯ ಮಣಿಪುರ ಹೊಳೆಯಲ್ಲಿ ಸೆ. 14ರ ಬೆಳಗ್ಗೆ ಜರಗಿತು.

ಧಾರ್ಮಿಕ ಕಾರ್ಯಕ್ರಮದ ಅಂಗ ವಾಗಿ ಬೆಳಗ್ಗೆ ವಿಶ್ವಕರ್ಮ ಯಜ್ಞ, ಕಟಪಾಡಿ ಮಣಿಪುರ ನದಿಯಲ್ಲಿ ಸಿಮೋಲ್ಲಂಘನ ಅನಂತರ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಮತ್ತು ಕಾಪು ಶ್ರೀ ಕಾಳಿಕಾಂಬಾ ದೇಗುಲಕ್ಕೆ ಭೇಟಿ ನೀಡಿ ಪಡುಕುತ್ಯಾರು ಶ್ರೀ ದುರ್ಗಾದೇವಿ ಮಂದಿರವನ್ನು ಸಂದರ್ಶಿಸಿ ಪಡುಕುತ್ಯಾರು ಶ್ರೀಮತ್‌ ಆನೆಗುಂದಿ ಮಹಾಸಂಸ್ಥಾನಕ್ಕೆ -ಪೂರ್ಣಕುಂಭ ಮೆರವಣಿಗೆಯಲ್ಲಿ ಪಾದಾರ್ಪಣೆಗೈದರು.

ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ, ಶ್ರೀಮತ್‌ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ಬಿ. ಸೂರ್ಯಕುಮಾರ್‌ ಆಚಾರ್ಯ ಹಳೆಯಂಗಡಿ, ಪ್ರ| ಕಾರ್ಯದರ್ಶಿ ಲೋಕೇಶ್‌ ಎಂ.ಬಿ. ಆಚಾರ್‌ ಕಂಬಾರು, ಪ್ರಮುಖರಾದ ಕೇಶವ ಆಚಾರ್ಯ ಮಂಗಳೂರು, ಬಿ. ಯಜ್ಞೇಶ್‌ ಆಚಾರ್‌, ಗಂಗಾಧರ ಆಚಾರ್ಯ ಕೊಂಡೆವೂರು, ಪ್ರಶಾಂತ್‌ ಆಚಾರ್ಯ ಕಟಪಾಡಿ, ಮಧು ಆಚಾರ್ಯ ಮೂಲ್ಕಿ, ವಡೇರ ಹೋಬಳಿ ಶ್ರೀಧರ ಆಚಾರ್ಯ, ಮಠದ ದಿವಾಣರಾದ ಲೋಲಾಕ್ಷ ಆಚಾರ್ಯ, ರೂಪೇಶ್‌ ಆಚಾರ್ಯ ಮಂಚಕಲ್, ಪುರೋಹಿತ್‌ ಅಕ್ಷಯ ಶರ್ಮ, ಹರಿಶ್ಚಂದ್ರ ಆಚಾರ್ಯ, ನಾಗರಾಜ ಆಚಾರ್ಯ, ಬಿ.ಸಿ. ರಾಜೇಶ್‌ ಆಚಾರ್ಯ ಕಟಪಾಡಿ ಉಪಸ್ಥಿತರಿದ್ದರು.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here