ಕಟಪಾಡಿ: ಶಂಕರಪುರ ದಲ್ಲಿರುವ ದ್ವಾರಕಮಾಯಿ ಶ್ರೀ ಸಾಯಿಬಾಬಾ ಮಂದಿರದ ಸಮಗ್ರ ಜೀರ್ಣೋದ್ಧಾರದ ಅಂಗವಾಗಿ ಗುರೂಜಿ ಸಾಯಿ ಈಶ್ವರ್ ನೇತೃತ್ವದಲ್ಲಿ ಮುಷ್ಟಿಕಾಣಿಕೆ ಸಮರ್ಪಣೆ ಹಾಗೂ ಗುರುಪೂಜೆ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜು.16ರಂದು ನೆರವೇರಿತು.
ಈ ಸಂದರ್ಭ ಬೆಳಗ್ಗೆ ಗಣಹೋಮ, ಅಶೋಕ್ ಶೇರಿಗಾರ್ ಅವರಿಂದ ನಾದಸ್ವರ ಸೇವೆ ಜರಗಿತು. ಗುರುಪೂರ್ಣಿಮೆಯ ಅಂಗವಾಗಿ ಶಿರ್ಡಿ ಸಾಯಿಬಾಬಾ ಮೂರ್ತಿಗೆ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ ಜರಗಿತು.
ಅನಂತರ ಪದ್ಮಶ್ರೀ ಡಾ| ಕದ್ರಿ ಗೋಪಾಲನಾಥ್ ಅವರ ಶಿಷ್ಯ ಜೆ. ಚಂದ್ರಶೇಖರ್ ಇವರಿಂದ ಸ್ಯಾಕ್ಸೋಫೋನ್ ವಾದನ ಸೇವೆ ಜರುಗಿತು.
ಬೆಂಗಳೂರಿನ ಉದ್ಯಮಿಗಳಾದ ದಯಾನಂದ ಪೂಜಾರಿ ಹಾಗೂ ಕುಟುಂಬಸ್ಥರಿಂದ ಅನ್ನಸಂತರ್ಪಣಾ ಸೇವಾ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭ ಟ್ರಸ್ಟಿಗಳಾದ ವೈ.ವಿಶ್ವನಾಥ ಸುವರ್ಣ, ಕಿರಣ್ ಜೋಗಿ, ಗೀತಾಂಜಲಿ ಎಂ. ಸುವರ್ಣ, ದಯಾನಂದ ಹೆಜಮಾಡಿ, ರಾಧಾಕೃಷ್ಣ ಮೆಂಡನ್, ಪುರಂದರ ಸಾಲ್ಯಾನ್, ನೀರಜ್ ಪಾಟೀಲ್ ಪರ್ಕಳ, ಜಯಶ್ರೀ ಶೆಟ್ಟಿ, ಜಯಶ್ರೀ ಕೋಟ್ಯಾನ್, ಸಂಪತ್ ಶೆಟ್ಟಿ, ಪ್ರಕಾಶ್ ಆಚಾರ್ಯ, ಪ್ರಸಾದ್ ಅಮೀನ್, ಸತೀಶ್ ದೇವಾಡಿಗ, ಸುಶಾಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.