SHARE

ಕುಂದಾಪುರ: ಶ್ರೀ ಕಾಶೀ ಮಠಾಧೀಶರಾದ ಪರಮಪೂಜ್ಯ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಐದು ದಿನಗಳ ಮೊಕ್ಕಾಂಗೆ ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನಕ್ಕೆ ಆಗಮಿಸಿದರು.

ಸೋಮವಾರ ಶ್ರೀಗಳವರನ್ನು ಪೂರ್ಣ ಕುಂಭ ಸ್ವಾಗತದ ಮೂಲಕ ದೇಗುಲದಲ್ಲಿ ಬರಮಾಡಿಕೊಳ್ಳಲಾಯಿತು. ದೇವಳದ ಆಡಳಿತ ಮಂಡಳಿಯವರು ಪಾದಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀ ರಾಮ ಸೇವಾ ಸಂಘದ ಸದಸ್ಯರು, ಶ್ರೀ ರಾಮ ದೇವ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಶ್ರೀ ದೇವಳದಲ್ಲಿ ಗುರುವರ್ಯರು ಜ. 22 ರಿಂದ 26ರ ಶುಕ್ರವಾರದ ತನಕ ಮೊಕ್ಕಾಂ ಮಾಡಲಿದ್ದಾರೆ. ಜ. 26ರಂದು ಗುರುಗಳಿಂದ ತಪ್ತ ಮುದ್ರಾಧಾರಣೆ ನಡೆಯಲಿದೆ. ಸಂಜೆ ಶ್ರೀಗಳವರನ್ನು ಮುಂದಿನ ಮೊಕ್ಕಾಂ ಹೆಬ್ರಿಗೆ ಬೀಳ್ಕೊಡಲಾಗುತ್ತದೆ.

LEAVE A REPLY

Please enter your comment!
Please enter your name here