Home ಧಾರ್ಮಿಕ ಸುದ್ದಿ ಕಶೆಕೋಡಿ ಕ್ಷೇತ್ರ: ಧಾರ್ಮಿಕ ವಿಧಿಗಳು ಸಂಪನ್ನ

ಕಶೆಕೋಡಿ ಕ್ಷೇತ್ರ: ಧಾರ್ಮಿಕ ವಿಧಿಗಳು ಸಂಪನ್ನ

1831
0
SHARE

ಬಂಟ್ವಾಳ : ಕುಡಾಲ್‌ ದೇಶಸ್ಥ ಆದ್ಯ ಗೌಡ್‌ ಬ್ರಾಹ್ಮಣ ಸಮಾಜದ ಆಡಳಿತಕ್ಕೊಳಪಟ್ಟ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ದೇವರಿಗೆ ನಡೆಸುವ ಅಭಿಷೇಕದ ಕಲಶಗಳನ್ನು ಭಕ್ತರು ಕ್ಷೇತ್ರಕ್ಕೆ ತಂದರು.

ದಾಭೋಲಿ ಸಂಸ್ಥಾನದ ಶ್ರೀ ದತ್ತಾನಂದ ಸರಸ್ವತಿ ಸ್ವಾಮೀಜಿ ಉಪ ಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ಶ್ರೀ ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕಲಶಾಭಿಷೇಕ ವಿಧಿಗಳು ನಡೆದವು. ಬೆಳಗ್ಗೆ 9.30ರಿಂದ ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ 11ರಿಂದ ಭದ್ರತಾ ಕೊಠಡಿ ಉದ್ಘಾಟನೆ ಮತ್ತು ಧಾರ್ಮಿಕ ಉಪನ್ಯಾಸಗಳು ನಡೆದವು.

ಆಡಳಿತ ಮೊಕ್ತೇಸರರಾದ ಕಲ್ಲೇಗ ಸಂಜೀವ ನಾಯಕ್‌, ಆನುವಂಶಿಕ ಮೊಕ್ತೇಸರ ಕಂಟೀಕ ಗೋಪಾಲ ಶೆಣೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಲ್ಲಗುಡ್ಡೆ ರಾಜಾರಾಮ ಪ್ರಭು, ಪ್ರ. ಕಾರ್ಯದರ್ಶಿ ಕಂಟೀಕ ಶಾಂತಾರಾಮ ಶೆಣೈ, ಉಪಾಧ್ಯಕ್ಷ ಬೋಳಿಯಾರು ಯೋಗೀಶ್‌ ನಾಯಕ್‌, ಪ್ರವೀಣ್‌ ಎಸ್‌. ದರ್ಬೆ, ಕಾರ್ಯದರ್ಶಿ ಮರೋಳಿ ಗಣೇಶ್‌ ಶೆಣೈ, ದಯಾನಂದ ಪ್ರಭು, ಲೆಕ್ಕಪರಿಶೋಧಕ ಕೆಂಚಪಾಲು ಬಾಲಕೃಷ್ಣ ಪ್ರಭು, ಮಾರ್ಗದರ್ಶಕ ಕಂಟೀಕ ಅನಂತ ಶೆಣೈ, ಡೆಜ್ಜಾರು ಗಣಪತಿ ಶೆಣೈ, ಆಡಳಿತ ಸಮಿತಿಯ ಕಾರ್ಯನಿರ್ವಾಹಕ ಮೊಕ್ತೇಸರ ರಾಮ್‌ಗಣೇಶ್‌ ಪ್ರಭು, ಆರ್ಥಿಕ ಕಾರ್ಯನಿರ್ವಾಹಕ ಮೊಕ್ತೇಸರ ಪ್ರಭಾಕರ ನಾಯಕ್‌ ದರ್ಬೆ ಸಹಿತ ಮೊಕ್ತೇಸರರು, ಉತ್ಸವ ಸಮಿತಿ ಪ್ರಮುಖರು, ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here