Home ಧಾರ್ಮಿಕ ಸುದ್ದಿ 111 ಅಡಿ ಎತ್ತರದ ಶಿವಲಿಂಗ; “ಏಶ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌’ನಲ್ಲಿ ದಾಖಲೆ

111 ಅಡಿ ಎತ್ತರದ ಶಿವಲಿಂಗ; “ಏಶ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌’ನಲ್ಲಿ ದಾಖಲೆ

2103
0
SHARE

ಕಾಸರಗೋಡು: ಕೇರಳದ ರಾಜಧಾನಿ ತಿರುವನಂತಪುರ ದನೆಯ್ಯ ಟಿಂಗರ ಚೆಂಗಲ್‌ ಮಹೇಶ್ವರ ಶಿವಪಾರ್ವತಿ ದೇವಸ್ಥಾನದಲ್ಲಿ ನಿರ್ಮಾಣವಾದ 111.2 ಅಡಿ ಎತ್ತರದ ಶಿವಲಿಂಗ ರವಿವಾರ ಲೋಕಾರ್ಪಣೆ ಗೊಂಡಿತು.

ದೇವಸ್ಥಾನದ ಮಠಾಧಿಪತಿ ಸ್ವಾಮಿ ಮಹೇಶ್ವರಾನಂದ ಸರಸ್ವತಿ ಅವರು ಬೃಹತ್‌ ಶಿವಲಿಂಗವನ್ನು ಲೋಕಾರ್ಪಣೆಗೈದರು. ಎತ್ತರ ಹಾಗೂ ವಿಸ್ತಾರದಲ್ಲಿ ಏಶ್ಯಾದಲ್ಲೇ ಅತ್ಯಂತ ಎತ್ತರದ “ಶಿವಲಿಂಗ” ಪ್ರತಿಷ್ಠೆ ಯಾಗಿದೆ ಎಂದು ಏಶ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಗಿನ್ನೆಸ್‌ ಬುಕ್‌ನಲ್ಲೂ ಈ ಶಿವಲಿಂಗ ಸ್ಥಾನ ಪಡೆದು ಕೊಳ್ಳಲಿದೆ. ಕರ್ನಾಟಕದ ಕೋಲಾರ ಕೋಟಿ ಲಿಂಗ ದೇವಸ್ಥಾನದಲ್ಲಿರುವ 108 ಅಡಿ ಎತ್ತರದ ಕೋಟಿ ಲಿಂಗ ಈ ವರೆಗೆ ಅತ್ಯಂತ ಎತ್ತರದ ಶಿವಲಿಂಗ ಎಂದು ಹೆಸರು ಪಡೆದಿತ್ತು. ಇದನ್ನು ಮೀರಿ 111.2 ಅಡಿ ಎತ್ತರದ ಈ ಶಿವಲಿಂಗವನ್ನು ನಿರ್ಮಿಸಲಾಗಿದೆ. ಆ ದಾಖಲೆಯನ್ನು ನೆಯ್ಯಟಿಂಗರ ಶಿವಲಿಂಗ ಅಳಿಸಿ ಹಾಕಿದೆ. ಶಿವಲಿಂಗದೊಳಗೆ ರಚನೆಗೊಂಡ ಶಿಲ್ಪಗಳು ಭಕ್ತರನ್ನು ಆಕರ್ಷಿಸುತ್ತಿವೆ.

ಈ ಕ್ಷೇತ್ರದ ನವಗ್ರಹ ಮಂಟಪದಲ್ಲಿ ನವ ಗ್ರಹಗಳ ಪ್ರತಿಷ್ಠೆಯನ್ನೂ ನೆರವೇರಿಸಲಾಗಿದೆ. ಈ ನವಗ್ರಹಗಳನ್ನು ಮಹಾಬಲಿಪುರಂನಲ್ಲಿ ತಯಾರಿಸಲಾಗಿದ್ದು, ಅಲ್ಲಿಂದ ತರಲಾಗಿದೆ. ಈ ಕ್ಷೇತ್ರದಲ್ಲಿ 108 ಶಿವಲಿಂಗ ಪ್ರತಿಷ್ಠೆಯೂ ಇದೆ. ಸುಮಾರು 10 ಅಂತಸ್ತಿನ ಕಟ್ಟಡದಷ್ಟು ಎತ್ತರದಲ್ಲಿರುವ ಈ ಶಿವಲಿಂಗ ಶೀಘ್ರದಲ್ಲೇ ಗಿನ್ನೆಸ್‌ ಬುಕ್‌ನಲ್ಲೂ ಸ್ಥಾನ ಪಡೆಯುವ ಸಾಧ್ಯತೆಯಿದೆ. 30 ಮಂದಿ ಶಿಲ್ಪಿಗಳು ಶಿವಲಿಂಗದೊಳಗೆ ವಿಸ್ಮಯಕಾರಿ ಹಾಗೂ ಮನೋಹರವಾದ ಶಿಲ್ಪಗಳನ್ನು ರಚಿಸಿದ್ದಾರೆ. ಸಂತರ ಹಾಗೂ ಧಾರ್ಮಿಕ ಸಾಧಕರ ಕೆತ್ತನೆಗಳು ಅದರೊಳಗಿವೆ. ಭಕ್ತರು ನೀಡಿದ ನೆರವಿನಿಂದ ಈ ಶಿವಲಿಂಗವನ್ನು ನಿರ್ಮಿಸಲಾಗಿದೆ.

ಶಿವಲಿಂಗದೊಳಗಿನ ಸುರಂಗ ಮಾರ್ಗದ ಮೂಲಕ ಸಾಗುವಾಗ ಹಿಮಾಲಯದಲ್ಲಿ ನಡೆದಾಡಿದ ಅನುಭವವಾಗುತ್ತದೆ ಎಂದಬುದಾಗಿ ಭಕ್ತರು ಹೇಳುತ್ತಿದ್ದಾರೆ. ದೇವಸ್ಥಾನದ ಮಠಾಧಿಪತಿ ಸ್ವಾಮಿ ಮಹೇಶ್ವರಾನಂದ ಸರಸ್ವತಿ ಅವರ ಕಲ್ಪನೆ ಹಾಗೂ ಆಶಯದದಂತೆ ಬೃಹತ್‌ ಶಿವಲಿಂಗ ನಿರ್ಮಾಣವಾಗಿದೆ.

LEAVE A REPLY

Please enter your comment!
Please enter your name here