Home ಧಾರ್ಮಿಕ ಸುದ್ದಿ ವಾರ್ಷಿಕ ಮಹೋತ್ಸವ, ಸ್ಮರಣ ಸಂಚಿಕೆ ಬಿಡುಗಡೆ

ವಾರ್ಷಿಕ ಮಹೋತ್ಸವ, ಸ್ಮರಣ ಸಂಚಿಕೆ ಬಿಡುಗಡೆ

ಪೆರ್ಮುದೆ: ಸಂತ ಲಾರೆನ್ಸ್‌ ಇಗರ್ಜಿ

167
0
SHARE

ಕಾಸರಗೋಡು: ಪೆರ್ಮುದೆ ಲಾರೆನ್ಸ್‌ ನಗರದ ಸೈಂಟ್ ಲಾರೆನ್ಸ್‌ ದಿ ಮಾರ್ಟಿರ್‌ ಇಗರ್ಜಿಯಲ್ಲಿ ವಾರ್ಷಿಕ ಮಹೋತ್ಸವ ರವಿವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.

ವಾರ್ಷಿಕ ಮಹೋತ್ಸವದ ಅಂಗವಾಗಿ ಸಂಭ್ರಮಿಕ ದಿವ್ಯ ಬಲಿಪೂಜೆ ನಡೆಯಿತು. ಕಾಸರಗೋಡು ಧರ್ಮವಲಯದ ಪ್ರಧಾನ ಧರ್ಮಗುರುಗಳೂ, ಬೇಳ ಶೋಕಮಾತಾ ದೇವಾಲಯದ ಧರ್ಮಗುರುಗಳೂ ಆದ ಫಾ| ಜೋನ್‌ ವಾಸ್‌ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದರು. ಪೆರ್ಮುದೆ ಇಗರ್ಜಿಯ ಧರ್ಮಗುರು ಫಾ| ಮೆಲ್ವಿನ್‌ ಫೆರ್ನಾಂಡಿಸ್‌, ಫಾ| ಸುನಿಲ್ ಲೋಬೊ ಕೊಲ್ಲಂಗಾನ, ಫಾ| ಸುನಿಲ್ ಡಿ’ಸೋಜ ಉಕ್ಕಿನಡ್ಕ ಉಪಸ್ಥಿತರಿದ್ದರು. ದಿವ್ಯ ಬಲಿ ಪೂಜೆಯ ಮುನ್ನ ಆಶೀರ್ವದಿತ ಮೋಂಬತ್ತಿಗಳನ್ನು ವಿತರಿಸಲಾಯಿತು. ಇಗರ್ಜಿಗೆ ದಾನವಾಗಿ ಲಭಿಸಿದ ಜನರೇಟರ್‌ಉದ್ಘಾಟಿಸಲಾಯಿತು. ಕಾಸರಗೋಡು ಧರ್ಮವಲಯದ ಪ್ರಧಾನ ಧರ್ಮಗುರು ಫಾ| ಜೋನ್‌ ವಾಸ್‌ ಆಶೀರ್ವಚನ ನಡೆಸಿ ಚಾಲನೆ ನೀಡಿದರು. ಪೆರ್ಮುದೆ ನೂತನ ಇಗರ್ಜಿಯ ಉದ್ಘಾಟನೆಯ ಪ್ರಯುಕ್ತ ಪ್ರಕಟಿಸಿದ ‘ಪೆರ್ಮುದೆಚೊ ಪರ್ಜಳ್‌’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

LEAVE A REPLY

Please enter your comment!
Please enter your name here