Home ಧಾರ್ಮಿಕ ಕಾರ್ಯಕ್ರಮ ಕಾವುಗೋಳಿಯಲ್ಲಿ ಏಕಾದಶ ರುದ್ರಾಭಿಷೇಕ

ಕಾವುಗೋಳಿಯಲ್ಲಿ ಏಕಾದಶ ರುದ್ರಾಭಿಷೇಕ

ದ್ವೈತ ಅದ್ವೈತ ಸಂಗಮ ಭೂಮಿ

1229
0
SHARE
ಜೀರ್ಣೋದ್ಧಾರ ಕಾಮಗಾರಿಗೆ ಪೂರ್ವಭಾವಿಯಾಗಿ ರುದ್ರಾಭಿಷೇಕ ಜರಗಿತು.

ಕಾಸರಗೋಡು: ದ್ವೈತ ಅದ್ವೈತ ಸಂಗಮ ಭೂಮಿಯಾದ ಸಿಪಿಸಿಆರ್‌ಐ ಪರಿಸರದಲ್ಲಿ ತ್ರಿವಿಕ್ರಮ ಪಂಡಿತರಿಂದ 13ನೇ ಶತಮಾನದಲ್ಲಿ ಸ್ಥಾಪಿಸಲ್ಪಟ್ಟ ಅತೀ ಪುರಾತನವೂ ಕಾರಣಿಕವೂ ಆದ ಕಾವುಗೋಳಿ ಶ್ರೀ ಶಿವ ಕ್ಷೇತ್ರ ಒಂದೊಮ್ಮೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ದೇವಾಲಯವು ಕಾವು ಪಟ್ಟೇರಿ ಕುಟುಂಬಸ್ಥರ ಅಧೀನ ದಲ್ಲಿದ್ದು ಕಾಲಾಗತಿಗನುಸಾರವಾಗಿ ಕ್ಷೇತ್ರವು ಶಿಥಿಲವಾಯಿತು. ಇದೀಗ ದೇಗುಲವನ್ನು ಜೀರ್ಣೋ ದ್ಧಾರಗೊಳಿಸಲು ನಿರ್ಧರಿಸಲಾಗಿದೆ.

ಶ್ರೀ ಕ್ಷೇತ್ರ ಜೀರ್ಣೋದ್ಧಾರ ಕಾಮಗಾರಿಗಳ ಮುನ್ನುಡಿಯಾಗಿ ಕ್ಷೇತ್ರ ತಂತ್ರಿವರ್ಯರಾದ ವೇ| ಮೂ| ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ತಂತ್ರಿವರ್ಯರಾದ ಬ್ರಹ್ಮಶ್ರೀ ವಿಷ್ಣು ಪ್ರಕಾಶ ಪಟ್ಟೇರಿ ಕಾವುಮಠ ಉಪಸ್ಥಿತಿಯಲ್ಲಿ, ಭಕ್ತಜನರ ಸಮಾಗಮದಲ್ಲಿ ಶ್ರೀ ಮಹಾಗಣಪತಿ ಹೋಮ ಹಾಗೂ ಏಕಾದಶ ರುದ್ರಾಭಿಷೇಕ ಜರಗಿತು.

ಕಾರ್ಯಕ್ರಮದ ಅಂಗವಾಗಿ ಸ್ವಸ್ತಿ ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ವಾಸ್ತು ಬಲಿ, ಮಹಾಪೂಜೆ ಮತ್ತು ಪ್ರಸಾದ ವಿತರಣೆ ಜರಗಿತು.

LEAVE A REPLY

Please enter your comment!
Please enter your name here