ಕಾಸರಗೋಡು: ಜನ ಸಾಮಾ ನ್ಯರ ದುಸ್ತರ ಬದುಕಿನ ಜಂಜಾಟದ ಮಧ್ಯೆ ಮನಸ್ಸಿಗೆ ಹಿತ ನೀಡುವ ಭಗವಂತನ ನಾಮಸ್ಮರಣೆ ನಮ್ಮನ್ನು ಸನ್ಮಾರ್ಗದತ್ತ ಒಯ್ಯುವಲ್ಲಿ ಸಹಕಾರಿಯಾಗಲಿದೆ ಎಂದು ಕುಂದಾಪುರ ಕೋಡಿಯ ಶ್ರೀ ರಾಮಾಮೃತ ಭಜನ ಮಂಡಳಿಯ ಕಾರ್ಯದರ್ಶಿ ಪ್ರವೀಣ್ ಕುಮಾರ್ ಹೇಳಿದರು.
ಅವರು ಕೂಡ್ಲು ವಿಷ್ಣುಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜರಗಿದ ಕುಣಿತ ಭಜನ ತರಬೇತಿ ಶಿಬಿರದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಭಜನೆಯಿದ್ದಲ್ಲಿ ವಿಭಜನೆಯಿಲ್ಲ. ಕರಾವಳಿಯ ಬದುಕಿನ ಬವಣೆಯನ್ನು ಅನುಭವಿಸಿ ಅರಿತ ಅವರು ಇಂತಹಾ ಪ್ರತಿಕೂಲ ಪರಿಸ್ಥಿತಿಯಲ್ಲೂ ಭಗವಂತನ ನಾಮಸ್ಮರಣೆಯಿಂದಾಗಿ ಜೀವನದ ಪಥದಲ್ಲಿ ಉತ್ತುಂಗಕ್ಕೆ ಏರಿಸುವಲ್ಲಿ ಭಜನೆಯ ಪ್ರಭಾವವನ್ನು ಸಾಮೀಪ್ಯದಿಂದ ಅನುಭವಿಸಿದ ಬಗೆಯನ್ನು ವಿವರಿಸಿದರು.
ವಿಷ್ಣು ಶ್ಯಾನುಭೋಗ್ ವಿಷ್ಣುಮಂಗಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಶಾಂತ್ ಕುಮಾರ್ ಕೋಡಿ, ನವೀನ್, ಕಿರಣ್, ರವಿ , ವೀಣಾ ಪ್ರಸನ್ನ ಶ್ಯಾನು ಭೋಗ್ ಉಪಸ್ಥಿತರಿದ್ದರು. ಬಿ.ಸುರೇಶ್ ನಾೖಕ್ ಕೂಡ್ಲು ಸ್ವಾಗತಿಸಿ, ಪ್ರಾಸ್ತಾವಿಕ ನುಡಿದರು. ಮಾಲತಿ ಜಗದೀಶ್ ವಂದಿಸಿದರು. ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.