Home ಧಾರ್ಮಿಕ ಸುದ್ದಿ ಅನಂತನ ಚತುರ್ದಶಿ ವ್ರತ ಆಚರಣೆ

ಅನಂತನ ಚತುರ್ದಶಿ ವ್ರತ ಆಚರಣೆ

1591
0
SHARE
ಶ್ರೀ ವರದರಾಜ ವೆಂಕಟರಮಣ ದೇಗುಲದಲ್ಲಿ ವ್ರತ ಆಚರಿಸಲಾಯಿತು.

ಕಾಸರಗೋಡು: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ಅನಂತ ಚತುರ್ದಶಿ ವ್ರತ ಆಚರಣೆ ವೈಭವದಿಂದ ನಡೆಯಿತು.

ಬೆಳಗ್ಗೆ ಹತ್ತು ಸಮಸ್ತರಿಂದ ಪ್ರಾರ್ಥನೆ, ಯಮುನಾ ಪೂಜೆ, ಕಲಶ ಪ್ರತಿಷ್ಠೆ, ಪಂಚಾಮೃತ, ಭಾಗೀರಥಿ ಹಾಗೂ ಪುಳುಕಾಭಿಷೇಕ ಜರಗಿತು. ಮಧ್ಯಾಹ್ನ ಮಹಾ ನೈವೇದ್ಯ, ಹರಿವಾಣ ನೈವೇದ್ಯ ಸಮರ್ಪಿಸಿ ದೇವರಿಗೆ ಮಹಾ ಮಂಗಳಾರತಿ ನಡೆಯಿತು. ಬಳಿಕ ಅನಂತ ಚತುರ್ದಶ ಪ್ರದಕ್ಷಿಣೆ ನಮಸ್ಕಾರ ನಡೆದು ಪ್ರಸಾದ ವಿತರಣೆ ಮಾಡಲಾಯಿತು. ಭೂರೀ ಸಮಾರಾಧನೆಯೂ ಜರುಗಿತು.

ಸಂಜೆ ಅನಂತ ಚತುರ್ದಶಿ ವ್ರತದ ಕಥಾ ಪಾರಾಯಣವನ್ನು ಕ್ಷೇತ್ರದ ಪ್ರಧಾನ ಅರ್ಚಕ ಕೆ.ವೇದವ್ಯಾಸ ಭಟ್ ಅವರು ನಡೆಸಿಕೊಟ್ಟರು.

ರಾತ್ರಿ ಮಹಾಪೂಜೆ ನಡೆದು ಪ್ರಸಾದ ವಿತರಣೆ ಮಾಡಲಾಯಿತು. ದೇವಸ್ಥಾನದ ಗರ್ಭಗುಡಿಯ ಆವರಣವನ್ನು ಫಲವಸ್ತು ಗಳು, ತರಕಾರಿಗಳು ಹಾಗೂ ಹೂಗಳಿಂದ ಭವ್ಯವಾಗಿ ಅಲಂಕರಿಸಲಾಗಿತ್ತು.

LEAVE A REPLY

Please enter your comment!
Please enter your name here