Home ಧಾರ್ಮಿಕ ಸುದ್ದಿ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸಾನ: ಬಾಲಾಲಯ ಪ್ರತಿಷ್ಠೆ

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸಾನ: ಬಾಲಾಲಯ ಪ್ರತಿಷ್ಠೆ

1803
0
SHARE

ಸಂಪ್ಯ : ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಉಳ್ಳಾಲ್ತಿ ಮತ್ತು ಪರಿವಾರ ದೈವಗಳನ್ನು ಬಾಲಾಲಯದಲ್ಲಿ ಪ್ರತಿಷ್ಠೆ ಮಾಡುವ ಹಿನ್ನೆಲೆಯಲ್ಲಿ ಡಿ. 4ರ ರಾತ್ರಿ ಹಾಗೂ 5ರ ಹಗಲು ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು.

ಬ್ರಹ್ಮಶ್ರೀ ನಾಗೇಶ ತಂತ್ರಿ ಅವರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ, ಆಚಾರ್ಯ ವರಣ, ಸ್ವಸ್ತಿ ಪುಣ್ಯಾಹ ವಾಚನ, ನರಸಿಂಹ ಹೋಮ, ಬಾಧಾಕರ್ಷಣೆ, ಉಚ್ಚಾಟನೆ, ದುರ್ಗಾಪೂಜೆ ನಡೆದು ಪ್ರಸಾದ ವಿತರಣೆ ಮಾಡಲಾಯಿತು.

ಡಿ. 5ರ ಬೆಳಗ್ಗೆ 12 ತೆಂಗಿನಕಾಯಿ ಗಣಪತಿ ಹೋಮ, ಸಂಜೀವಿನಿ ಮೃತ್ಯುಂಜಯ ಹೋಮ, ಪವಮಾನ ಹೋಮ, ತಿಲಾ ಹೋಮ, ಆಶ್ಲೇಷಾ ಬಲಿ, ಅನುಜ್ಞಾ ಕಲಶ ಪೂಜೆ, ದೈವಸ್ಥಾನದಲ್ಲಿ ಕಲಶಾಭಿಷೇಕ, ತಂಬಿಲ ಸೇವೆ, ಬಾಲಾಲಯ ಪ್ರತಿಷ್ಠೆ, ದಂಪತಿ ಪೂಜೆ, ದ್ವಾದಶ ಮೂರ್ತಿ ಆರಾಧನೆ ನಡೆಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು ಬೈಲುಗುತ್ತು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here