ಸಂಪ್ಯ: ಆರ್ಯಾಪು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ. 12, 13ರಂದು ಕಿರುಷಷ್ಠಿ ಮಹೋತ್ಸವ ಜರಗಿತು.
ಶುಕ್ರವಾರ ಹೊರೆಕಾಣಿಕೆ ಸಮರ್ಪಣೆ ಆಗಿದ್ದು, ಮಧ್ಯಾಹ್ನ ಮಹಾಪೂಜೆ, ಉಗ್ರಾಣ ಪೂಜೆ, ಸಂಜೆ ದೀಪಾರಾಧನೆ, ದೊಡ್ಡ ರಂಗಪೂಜೆ, ಗಣೇಶ ಪ್ರಾರ್ಥನೆ ಜರಗಿತು. ಶನಿವಾರ ಬೆಳಗ್ಗೆ ಗಣಪತಿ ಹೋಮ ನಡೆದು, ಶ್ರೀ ಸುಬ್ರಹ್ಮಣ್ಯ ದೇವರಿಗೆ ಪವಮಾನಾಭಿಷೇಕ, ನಾಗ ದೇವರಿಗೆ ಆಶ್ಲೇಷ ಹೋಮ, ಆಶ್ಲೇಷ ಬಲಿ, ತುಲಾಭಾರ ಸೇವೆ, ಮಧ್ಯಾಹ್ನ ಮಹಾ ಪೂಜೆ ನಡೆದು, ಮಹಾ ಅನ್ನಸಂತರ್ಪಣೆ ಜರಗಿತು.
ಸಂಜೆ ದುರ್ಗಾಪೂಜೆ ನಡೆದು, ಶ್ರೀ ದೇವರ ಉತ್ಸವ ಬಲಿ ಹೊರಟಿತು. ಪೆರಿಯ ಬಲಿ ಉತ್ಸವ, ಕೇರಳ ಸಂಪ್ರದಾಯದ ನೃತ್ಯ ಬಲಿ ಸೇವೆ, ಸಾರ್ವಜನಿಕ ಕಟ್ಟೆಪೂಜೆ, ಸಂಪ್ಯ ಶ್ರೀ ಸುಬ್ರಹ್ಮಣ್ಯ ಕಟ್ಟೆ ದೇವರ ಸವಾರಿ ನಡೆಯಿತು.
ಜ. 13ರ ಬೆಳಗ್ಗೆ ದೇವರ ಬಲಿ ಹೊರಟು, ಮಧ್ಯಾಹ್ನ ದರ್ಶನ ಬಲಿ ನಡೆಯಿತು. ಬಟ್ಟಲು ಕಾಣಿಕೆ, ಗಂಧ ಪ್ರಸಾದ, ನವಕ ಕಲಶ, ಮಹಾಪೂಜೆ, ಮಂತ್ರಾಕ್ಷತೆ ಬಳಿಕ, ಶ್ರೀ ವ್ಯಾಘ್ರ ಚಾಮುಂಡಿ ದೈವಕ್ಕೆ ನೇಮ ಜರಗಿತು. ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ಜರಗಿತು.
ಪ್ರಧಾನ ಅರ್ಚಕ ರಾಘವೇಂದ್ರ ಭಟ್, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ- ಮಹಾವಿಷ್ಣು ದೇವಸ್ಥಾನದ ಅರ್ಚಕ ಕೃಷ್ಣ ಅವರು ದೊಡ್ಡ ರಂಗಪೂಜೆ ನೆರವೇರಿಸಿ ದರು. ಪವಿತ್ರಪಾಣಿ ರಾಘವೇಂದ್ರ ಪುತ್ತೂರಾಯ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಸದಸ್ಯ ರವಿಚಂದ್ರ ಆಚಾರ್ಯ, ಸುಧಾಕರ ರಾವ್ ಆರ್ಯಾಪು ಉಪಸ್ಥಿತರಿದ್ದರು.