Home ಧಾರ್ಮಿಕ ಸುದ್ದಿ ಭುವನೇಂದ್ರ ಶಿಲ್ಪ ಶಾಲೆ: ವಿಗ್ರಹ ರಚನೆಗೆ ಶತಮಾನದ ಇತಿಹಾಸ

ಭುವನೇಂದ್ರ ಶಿಲ್ಪ ಶಾಲೆ: ವಿಗ್ರಹ ರಚನೆಗೆ ಶತಮಾನದ ಇತಿಹಾಸ

ಗಣೇಶನ ವಿಗ್ರಹಕ್ಕೆ ನಿಗದಿತ ದರವಿಲ್ಲ

1398
0
SHARE
ಸಿದ್ಧಗೊಳ್ಳುತ್ತಿರುವ ಗಣೇಶನ ಮೂರ್ತಿಗಳು.

ಕಾರ್ಕಳ: ಶ್ರೀ ಪಡುತಿರುಪತಿ ವೆಂಕಟರಮಣ ದೇವಸ್ಥಾನದ ಬಳಿಯಲ್ಲಿನ ಶ್ರೀಮದ್‌ ಭುವನೇಂದ್ರ ಶಿಲ್ಪ ಶಾಲೆಯಲ್ಲಿ ಶತಮಾನಗಳಿಂದ ಗಣೇಶನ ವಿಗ್ರಹ ರಚನೆ ಮಾಡಿಕೊಂಡು ಬರಲಾಗುತ್ತಿದೆ. ವಿಗ್ರಹಕ್ಕೆ ದರ ನಿಗದಿಪಡಿಸದಿರುವುದೇ ಇಲ್ಲಿನ ವಿಶೇಷತೆಯಾಗಿದ್ದು, ಅಡಿಕೆ, ವೀಳ್ಯದೆಲೆ, ತೆಂಗಿನ ಕಾಯಿ ಸಲ್ಲಿಸಿ ಇಲ್ಲಿಂದ ವಿಗ್ರಹ ಪಡೆಯಬಹುದಾಗಿದೆ. ಗಣೇಶೋತ್ಸವ ಸಮಿತಿಯವರು, ಮನೆಯಲ್ಲಿ ವಿಗ್ರಹವಿಟ್ಟು ಪೂಜಿಸುವವರು ಇಲ್ಲಿಂದ ವಿಗ್ರಹ ಪಡೆಯುತ್ತಾರೆ. ವರ್ಷಕ್ಕೆ 60ರಿಂದ 70 ಮಣ್ಣಿನ ಗಣೇಶನ ವಿಗ್ರಹ ಇಲ್ಲಿಂದ ಪೂರೈಕೆಯಾಗುತ್ತಿವೆ.

ರೆಂಜಾಳ ಗೋಪಾಲ ಶೆಣೈ
1982ರಲ್ಲಿ ಪ್ರತಿಷ್ಠಾಪನೆಯಾದ ಧರ್ಮಸ್ಥಳದ ಶ್ರೀ ಬಾಹುಬಲಿ ಮೂರ್ತಿಯನ್ನು ನಿರ್ಮಾಣ ಮಾಡಿದ ಹಿರಿಮೆ ಹೊಂದಿರುವ ರೆಂಜಾಳ ಗೋಪಾಲ ಶೆಣೈ ಅವರು ಈ ಶಾಲೆಯ ಕರ್ತೃ. ಜಪಾನಿನಲ್ಲಿ ಪ್ರತಿಷ್ಠಾಪನೆಗೊಂಡ ಬುದ್ಧನ ವಿಗ್ರಹವನ್ನು ಇವರೇ ನಿರ್ಮಾಣ ಮಾಡಿದ್ದರು. ಅವರ ಮೊಮ್ಮಗ ರಾಧಾಮಾಧವ ಶೆಣೈ ಇದೀಗ ಶಿಲ್ಪ ಶಾಲೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ರಾಷ್ಟ್ರ ಪ್ರಶಸ್ತಿಯ ಗೌರವ
ಶಿಲ್ಪ ಕಲೆಯ ಸೇವೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಹೆಗ್ಗಳಿಕೆ ರೆಂಜಾಳ ಗೋಪಾಲ ಶೆಣೈ (ರೆಂಜಾಳ ಜನಾರ್ದನ ಶೆಣೈ ಅವರ ಮಗ) ಅವರದ್ದು. 1969ರಲ್ಲಿ ಅಂದಿನ ರಾಷ್ಟ್ರಪತಿ ಜಾಕೀರ್‌ ಹುಸೇನ್‌ ಗೋಪಾಲ ಶೆಣೈ ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದ್ದರು. ಶಿಲ್ಪ ಕಲೆಯ ಸಾಧನೆಗಾಗಿ ಗೋಪಾಲ ಶೆಣೈ ಹಾಗೂ ಅವರ ಮೊಮ್ಮಗ ರಾಧಾಮಾಧವ ಶೆಣೈ ಅವರನ್ನು ಹಲವಾರು ಪ್ರಶಸ್ತಿ- ಸಮ್ಮಾನಗಳು ಅರಸಿಬಂದಿವೆ.

ಉಚಿತ ಸೇವೆ
ರಾಧಾಮಾಧವ ಶೆಣೈ ಹಾಗೂ ರಮಾನಾಥ ನಾಯಕ್‌ ಆವೆ ಮಣ್ಣಿನ ವಿಗ್ರಹ ರಚನೆ ಮಾಡಿದರೆ, ರಮಾನಂದ ತಂತ್ರಿ ಹಾಗೂ ರಮೇಶ್‌ ತಂತ್ರಿ ಪೈಂಟಿಂಗ್‌ ಕಾರ್ಯ ಪೂರ್ಣಗೊಳಿಸುತ್ತಾರೆ. ಗುರುದರ್ಶನ್‌, ವಿಟuಲ್ ಕುಡ್ವ ಸಹಕಾರ ನೀಡುತ್ತಾರೆ. ಗಣೇಶನ ವಿಗ್ರಹ ನಿರ್ಮಾಣದಲ್ಲಿ ಪ್ರತಿ ಫ‌ಲಾಪೇಕ್ಷೆ ಇಲ್ಲದೆಯೇ ಇವರೆಲ್ಲ ಉಚಿತವಾಗಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಆವೆ ಮಣ್ಣಿನಿಂದಲೇ ಗಣೇಶನ ಮೂರ್ತಿ ರಚನೆ ಮಾಡಲಾಗುತ್ತಿದ್ದು, ಯಾವುದೇ ರಾಸಾಯನಿಕ ಪದಾರ್ಥ ಅಥವಾ ಬಣ್ಣವಾಗಲಿ ಬಳಸುತ್ತಿಲ್ಲ. ಹೀಗಾಗಿ ಪರಿಸರ ಸ್ನೇಹಿ ವಿಗ್ರಹ ಸಿದ್ಧವಾಗುತ್ತಿದೆ. ಕೆಲವೆಡೆ ಅಚ್ಚು ಹಾಕಿ ಮೂರ್ತಿ ತಯಾರಿ ಕಾರ್ಯ ನಡೆದರೆ ಇಲ್ಲಿ ಕೈಯಿಂದಲೇ ಸುಂದರ ಮೂರ್ತಿ ಅನಾವರಣಗೊಳ್ಳುತ್ತಿದೆ.

LEAVE A REPLY

Please enter your comment!
Please enter your name here