Home ಧಾರ್ಮಿಕ ಸುದ್ದಿ ಧರ್ಮಗುರು ಲೂವಿಸ್‌ರಿಗೆ ಬೀಳ್ಕೊಡುಗೆ

ಧರ್ಮಗುರು ಲೂವಿಸ್‌ರಿಗೆ ಬೀಳ್ಕೊಡುಗೆ

ವೇಣೂರು ಕ್ರಿಸ್ತರಾಜ ದೇವಾಲಯ

1902
0
SHARE

ವೇಣೂರು : ವೇಣೂರು ಕ್ರಿಸ್ತರಾಜ ದೇವಾಲಯದಲ್ಲಿ ಸುಮಾರು 7 ವರ್ಷಗಳ ಕಾಲ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಎಡಪದವಿನ ಪೆರಾಲ್‌ಗೆ ವರ್ಗಾವಣೆಗೊಂಡ ವಂ| ಆ್ಯಂಟನಿ ವಿ. ಲೂವಿಸ್‌ ಅವರ ಬೀಳ್ಕೊಡುಗೆ ಸಮಾರಂಭ ವೇಣೂರು ಚರ್ಚ್‌ನಲ್ಲಿ ನಡೆಯಿತು.

ಚರ್ಚ್‌ ಪಾಲನ ಪರಿಷತ್‌ ವತಿಯಿಂದ ಅವರನ್ನು ಸಮ್ಮಾನಿಸಿ ಬೀಳ್ಕೊಡಲಾಯಿತು. ಚರ್ಚ್‌ ಪಾಲನ ಪರಿಷತ್‌ ಉಪಾಧ್ಯಕ್ಷ ರೊನಾಲ್ಡ್‌ ಡಿ’ಸೋಜಾ, ಕಾರ್ಯದರ್ಶಿ ಸ್ಟೀವನ್‌ ಡಿಕುನ್ನಾ, ಸದಸ್ಯರು, ಐಸಿವೈಎಂ ಘಟಕದ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು. ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್‌ ಕ್ರಾಸ್ತ ಪ್ರಸ್ತಾವಿಸಿ, ಡೆನ್ನಿಸ್‌ ಸಿಕ್ವೇರಾ ಸಮ್ಮಾನಪತ್ರ ವಾಚಿಸಿದರು. ಗುರಿಕಾರ ಎಡ್ವರ್ಡ್‌ ರೇಗೊ ಸ್ವಾಗತಿಸಿ, ವಂದಿಸಿದರು. ವೇಣೂರು ಚರ್ಚಿನ ನವೀಕರಣ ಕಾರ್ಯವನ್ನು ಅತೀ ಕಡಿಮೆ ಅವಧಿಯಲ್ಲಿ ಅಚ್ಚುಕಟ್ಟಾಗಿ ಪೂರೈಸಿ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here