Home ಧಾರ್ಮಿಕ ಸುದ್ದಿ ಅತ್ತೂರು ಮಹೋತ್ಸವ ಸಂಪನ್ನ

ಅತ್ತೂರು ಮಹೋತ್ಸವ ಸಂಪನ್ನ

164
0
SHARE

ಕಾರ್ಕಳ: ಅತ್ತೂರು ಸಂತ ಲಾರೆನ್ಸ್‌ ಮೈನರ್‌ ಬಸಿಲಿಕಾದಲ್ಲಿ ಆ. 1ರಂದು ಸಿದ್ಧತಾ ಪ್ರಾರ್ಥನೆ ನೋವೇನಾ ಧಾರ್ಮಿಕ ವಿಧಿಗಳಿಂದ ಪ್ರಾರಂಭಗೊಂಡ ಸಂತ ಲಾರೆನ್ಸರ ಮಹೋತ್ಸವವು ಆ. 10ರಂದು ಸಂಪನ್ನಗೊಂಡಿತು.

ಮಂಗಳೂರಿನ ನಿವೃತ್ತ ಬಿಷಪ್‌ ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ನೇತೃತ್ವದಲ್ಲಿ ಸಂತ ಲಾರೆನ್ಸ್‌ ಮಹೋತ್ಸವದ ದಿವ್ಯ ಬಲಿಪೂಜೆ ನಡೆಯಿತು. ಬಳಿಕ ಪ್ರವಚನ ನೀಡಿದ ಅವರು, ನಮ್ಮ ಬದುಕು, ಜೀವನ ಕ್ರಮ ದೇವರಿಗೆ ಪ್ರಿಯವಾಗುವಂತಿರಬೇಕು. ಹಸಿದವರಿಗೆ ಅನ್ನ, ನೊಂದವರಿಗೆ ನೆರವಾಗುವ ಮೂಲಕ ಏಸುದೇವರನ್ನು ಅನುಕರಣೆ ಮಾಡಬೇಕು ಎಂದರು. ಬಲಿಸಿಕಾದ ನಿರ್ದೇಶಕ ವಂ| ಜಾರ್ಜ್‌ ಡಿ’ಸೋಜಾ, ಸಹಾಯಕ ಧರ್ಮಗುರು ಫಾ| ರಾಯ್‌ ಲೋಬೋ ಸಹಿತ 20 ಮಂದಿ ಧರ್ಮಗುರುಗಳು ಬಲಿಪೂಜೆಯಲ್ಲಿ ಪಾಲ್ಗೊಂಡರು. ಚರ್ಚ್‌ ಪಾಲನಾ ಮಂಡಳಿ ಉಪಾಧ್ಯಕ್ಷ ಜಾನ್‌ ಡಿ’ಸಿಲ್ವಾ, ಕಾರ್ಯದರ್ಶಿ ಎಲ್ವಿನಾ ಡಿ’ಸಿಲ್ವಾ, ಆಯೋಗಗಳ ಸಂಯೋಜಕ ರಿಚಾರ್ಡ್‌ ಪಿಂಟೋ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here