Home ಧಾರ್ಮಿಕ ಸುದ್ದಿ ಅತ್ತೂರು ಸಂತ ಲಾರೆನ್ಸ್‌ ಪುಣ್ಯಕ್ಷೇತ್ರ: ವಾರ್ಷಿಕ ಮಹೋತ್ಸವಕ್ಕೆ ಚಾಲನೆ

ಅತ್ತೂರು ಸಂತ ಲಾರೆನ್ಸ್‌ ಪುಣ್ಯಕ್ಷೇತ್ರ: ವಾರ್ಷಿಕ ಮಹೋತ್ಸವಕ್ಕೆ ಚಾಲನೆ

21062
0
SHARE

ಕಾರ್ಕಳ: ಪ್ರಸಿದ್ಧ ಕೆೈಸ್ತ ಪುಣ್ಯಕ್ಷೇತ್ರ ಅತ್ತೂರು ಸಂತ ಲಾರೆನ್ಸರ ಬಸಿಲಿಕಾದಲ್ಲಿ ಪವಿತ್ರ ವಾರ್ಷಿಕ ಮಹೋತ್ಸವಕ್ಕೆ ರವಿವಾರ ಚಾಲನೆ ದೊರೆಯಿತು. ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೊ ಅವರು ಧ್ವಜಾರೋಹಣ ಗೈಯುವ ಮೂಲಕ ಚಾಲನೆ ನೀಡಿದರು. ಬಳಿಕ ದಿವ್ಯ ಬಲಿಪೂಜೆ ನಡೆಸಿದರು. ಬೆಳಗ್ಗೆ ಪುಷ್ಕರಣಿಯಲ್ಲಿ ಸಂತ ಲಾರೆನ್ಸರ ಪವಾಡ ಮೂರ್ತಿಯನ್ನು ಅನಾವರಣಗೊಳಿಸಲಾಯಿತು. ಅಪರಾಹ್ನ 2.30ಕ್ಕೆ ಮತ್ತು 4.30ಕ್ಕೆ ಮಕ್ಕಳಿಗಾಗಿ ಬಲಿಪೂಜೆ ಮತ್ತು ವಿಶೇಷ ಪ್ರಾರ್ಥನೆ ನೆರವೇರಿತು.

ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಡಾ| ಅಲೋಶಿಯಸ್‌ ಪಾವ್‌É ಡಿ’ಸೋಜಾ ಕೊಂಕಣಿಯಲ್ಲಿ ದಿವ್ಯ ಬಲಿಪೂಜೆ ನಡೆಸಿದರು.

ಮಹೋತ್ಸವದ ಮೊದಲನೇ ದಿನ ರವಿವಾರವಾದ ಹಿನ್ನೆಲೆಯಲ್ಲಿ ಅತ್ತೂರು ಬಸಿಲಿಕಾದತ್ತ ಜನಸಾಗರವೇ ಹರಿದು ಬಂತು.

LEAVE A REPLY

Please enter your comment!
Please enter your name here