Home ಧಾರ್ಮಿಕ ಸುದ್ದಿ ಅತ್ತೂರು ಚರ್ಚ್‌: ನವದಿನಗಳ ಪ್ರಾರ್ಥನಾ ಮುಹೂರ್ತ

ಅತ್ತೂರು ಚರ್ಚ್‌: ನವದಿನಗಳ ಪ್ರಾರ್ಥನಾ ಮುಹೂರ್ತ

ಸಂತ ಲಾರೆನ್ಸ್‌ ಅತ್ತೂರು ಬಸಿಲಿಕಾ ; ಶಾಸಕರಿಂದ ಚಾಲನೆ

980
0
SHARE

ಕಾರ್ಕಳ: ಸಂತ ಲಾರೆನ್ಸ್‌ ಅತ್ತೂರು ಬಸಿಲಿಕಾದಲ್ಲಿ ಜ. 26ರಿಂದ 30ರವರೆಗೆ ನಡೆಯುವ, ಅತ್ತೂರು ಜಾತ್ರೆಯೆಂದೇ ಪ್ರಸಿದ್ಧಿ ಪಡೆದಿರುವ ಅತ್ತೂರು ವಾರ್ಷಿಕ ಮಹೋತ್ಸವದ (ಸಾಂತ್‌ಮಾರಿ) ಪ್ರಯುಕ್ತ ನವದಿನಗಳ ಪ್ರಾರ್ಥನಾ ಮುಹೂರ್ತಕ್ಕೆ ರವಿವಾರ ಶಾಸಕ ವಿ. ಸುನಿಲ್‌ ಕುಮಾರ್‌ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಅತ್ತೂರು ಜಾತ್ರೆ ಪ್ರತಿ ವರ್ಷ ವಿಜೃಂಭಣೆಯೊಂದಿಗೆ ವಿಶೇಷ ರೀತಿಯಲ್ಲಿ ನೆರವೇರುತ್ತಿದೆ. ಸರ್ವಧರ್ಮೀಯರ ಪುಣ್ಯ ಕ್ಷೇತ್ರ ಅತ್ತೂರು ಬಸಿಲಿಕಾದಲ್ಲಿ ಇದೀಗ ಸಂತ ಲಾರೆನ್ಸ್‌ರ ವಿಗ್ರಹ ನಿರ್ಮಾಣವಾಗುವ ಮೂಲಕ ಅಪರೂಪದ ಚರ್ಚ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಅತ್ತೂರು ಬಸಿಲಿಕಾದ ನಿರ್ದೇಶಕ ವಂ| ಜೋರ್ಜ್‌ ಡಿ’ಸೋಜಾ, ಕ್ರೈಸ್ತ ಅಭಿವೃದ್ಧಿ ನಿಗಮದ ಅಧ್ಯಕ್ಷ ಜೋಯ್ಲಸ್‌ ಡಿ’ಸೋಜಾ, ಜಿ.ಪಂ. ಸದಸ್ಯೆ ರೇಶ್ಮಾ ಉದಯ ಶೆಟ್ಟಿ, ನಿಟ್ಟೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸಬೀತಾ ಪೂಜಾರಿ, ಉಪಾಧ್ಯಕ್ಷ ಗೋಪಾಲ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಆಂತೋನಿ ಡಿ’ ಸೋಜಾ, ಅತ್ತೂರು ಬಸಿಲಿಕಾದ ಉಪಾಧ್ಯಕ್ಷ ಜಾನ್‌ ಡಿ’ಸಿಲ್ವಾ, ಪಾಲನಾ ಮಂಡಳಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಧರ್ಮಗುರು ರೋಯ್‌ ಲೋಬೋ ಸ್ವಾಗತಿಸಿ, ಉಪನ್ಯಾಸಕ ಮೆಲ್ವಿನ್‌ ಕ್ಯಾಸ್ತಲಿನೋ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಲೀನಾ ಡಿ’ಸಿಲ್ವಾ ವಂದಿಸಿದರು.

LEAVE A REPLY

Please enter your comment!
Please enter your name here