Home ಧಾರ್ಮಿಕ ಸುದ್ದಿ ಏಸು ಕ್ರಿಸ್ತರ ಆದರ್ಶ ನಮ್ಮದಾಗಲಿ: ಚಿಕ್ಕಮಗಳೂರು ಬಿಷಪ್‌

ಏಸು ಕ್ರಿಸ್ತರ ಆದರ್ಶ ನಮ್ಮದಾಗಲಿ: ಚಿಕ್ಕಮಗಳೂರು ಬಿಷಪ್‌

1130
0
SHARE

ಕಾರ್ಕಳ: ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದಲ್ಲಿ ವಾರ್ಷಿಕ ಮಹೋತ್ಸವದ ಎರಡನೇ ದಿನ ಚಿಕ್ಕಮಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಟಿ. ಅಂತೋಣಿಸ್ವಾಮಿ ಬಲಿಪೂಜೆ ನೆರವೇರಿಸಿದರು.

ಬಳಿಕ ಸಂದೇಶ ನೀಡಿದ ಅವರು, ನಮ್ಮ ಸತ್ಕಾರ್ಯಗಳು ದೇವರ ಅನುಗ್ರಹಕ್ಕೆ ಪಾತ್ರವಾಗುವುದು. ಏಸುಕ್ರಿಸ್ತರು ಇಡೀ ಸಮಾಜದ ಒಳಿತನ್ನು ಬಯಸಿದ್ದರು. ನಾವೂ ಕೂಡ ಪರಸ್ಪರ ಪ್ರೀತಿ ಹಂಚಿ ಏಸು ಕ್ರಿಸ್ತರ ಆದರ್ಶವನ್ನು ಅನುಕರಣೆ ಮಾಡಬೇಕು ಎಂದರು.

ಬಸ್ರೂರು ಧರ್ಮಕೇಂದ್ರದ ಧರ್ಮಗುರು ವಂ| ಚಾರ್ಲ್ಸ್‌ ನೊರೊನ್ಹಾ, ಬೆಳ್ತಂಗಡಿ ಚರ್ಚ್‌ನ ವಲಯ ಪ್ರಧಾನ ಧರ್ಮಗುರು ವಂ| ಬೊನವೆಂಚರ್‌ ನಜ್ರೆತ್‌, ಮುಕಮರ್‌ ಚರ್ಚ್‌ ಧರ್ಮಗುರು ವಂ| ಲೂಯಿಸ್‌ ಡೇಸಾ ರಾತ್ರಿಯ ಬಲಿಪೂಜೆ ನೆರವೇರಿಸಿದರು.

LEAVE A REPLY

Please enter your comment!
Please enter your name here