Home ಧಾರ್ಮಿಕ ಸುದ್ದಿ ಇಂದಿನಿಂದ ಜ.30ರವರೆಗೆ ಪ್ರಸಿದ್ಧ ಅತ್ತೂರು ಜಾತ್ರೆ

ಇಂದಿನಿಂದ ಜ.30ರವರೆಗೆ ಪ್ರಸಿದ್ಧ ಅತ್ತೂರು ಜಾತ್ರೆ

ಸಂತ ಲಾರೆನ್ಸ್‌ ಬಸಿಲಿಕದಲ್ಲಿ ವಾರ್ಷಿಕ ಮಹೋತ್ಸವಕ್ಕೆ ಸರ್ವ ಸಿದ್ಧತೆ

936
0
SHARE

ಕಾರ್ಕಳ: ಸಂತ ಲಾರೆನ್ಸ್‌ ಬಸಿಲಿಕದ ವಾರ್ಷಿಕ ಮಹೋತ್ಸವಕ್ಕೆ ಜ. 26ರಂದು ವಿಧ್ಯುಕ್ತ ಚಾಲನೆ ದೊರೆಯಲಿದೆ. ಮಹೋತ್ಸವವು 5 ದಿನಗಳ ಕಾಲ ಜ. 30ರವರೆಗೆ ವಿಜೃಂಭಣೆಯಿಂದ ಜರಗಲಿದೆ. ರ್ವಧರ್ಮೀಯರ ಪುಣ್ಯಕ್ಷೇತ್ರವಾಗಿರುವ ಅತ್ತೂರಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಯಿದೆ. ಈ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಮಾಡಲಾಗಿದ್ದು, 1 ಲಕ್ಷ ಚದರಡಿ ವಿಸ್ತಾರದಲ್ಲಿ ತಟ್ಟಿ ಹಾಗೂ ಪೆಂಡಾಲ್‌ ಹಾಕಲಾಗಿದೆ. ಚರ್ಚ್‌ ಎಡಬದಿಯಲ್ಲಿ ಸುಮಾರು 3 ಸಾವಿರ ಮಂದಿ ಕಾರ್ಯಕ್ರಮ ವೀಕ್ಷಿಸಲು ಎಲ್‌ಸಿಡಿ ಪರದೆ ಅಳವಡಿಸಲಾಗಿದೆ. ಚರ್ಚ್‌ ಹಾಗೂ ಸುತ್ತಮುತಲಿನ ಪರಿಸರದಲ್ಲಿ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ಪವಾಡ ಮೂರ್ತಿಯನ್ನು ಹೂವಿನಿಂದ ಅಲಂಕರಿಸಲಾಗಿದೆ.

ಪ್ರಾರ್ಥನೆಗೆ ಅವಕಾಶ
ಬಸಿಲಿಕದ ಬಲ ಬದಿ ಪವಾಡ ಮೂರ್ತಿ ಪ್ರತಿಷ್ಠಾಪಿಸಿದ ಪಕ್ಕದಲ್ಲಿ ಕಥೋಲಿಕ್‌ ಕ್ರೆçಸ್ತರಿಗೆ ಪಾಪನಿವೇದನೆಗೆ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಒಳಗೆ ಪ್ರಾರ್ಥನೆಗಾಗಿ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ನೀರಿನ ವ್ಯವಸ್ಥೆ
ಬಸಿಲಿಕಾದ ವಠಾರದ 5 ಕಡೆಗಳಲ್ಲಿ ಭಕ್ತಾದಿಗಳಿಗೆ ಕುಡಿಯಲು ಶುದ್ಧ ನೀರು, ತಂಪು ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಅತ್ತೂರು ವಠಾರದಲ್ಲಿ ಸುಮಾರು 40 ಶೌಚಾಲಯ ನಿರ್ಮಿಸಲಾಗಿದೆ. ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯವಿದೆ.

ಪಾರ್ಕಿಂಗ್‌
ದೂಪದಕಟ್ಟೆ ದ್ವಾರ ಪ್ರವೇಶಿಸುವಲ್ಲಿ ಎಡಬದಿಗೆ ವಿಸ್ತಾರವಾದ ಜಾಗವನ್ನು ವಾಹನ ಪಾರ್ಕಿಂಗ್‌ಗಾಗಿ ಗುರುತಿಸಲಾಗಿದೆ. ಕೊಡಂಗೆ, ಸಂತ ಲಾರೆನ್ಸ್‌ ಹೈಸ್ಕೊಲ್‌ ಆಟದ ಮೈದಾನ, ಚೇತನ ಹಳ್ಳಿ-ಗುಂಡ್ಯಡ್ಕ ರಸ್ತೆಯ ಎರಡೂ ಬದಿಯಲ್ಲಿ ಪಾರ್ಕಿಂಗ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಅಂಗಡಿ ಮುಂಗಟ್ಟು
ನಿಟ್ಟೆ ಗ್ರಾಮ ಪಂಚಾಯತ್‌ 10 ಅಡಿ ಅಗಲದ ಸುಮಾರು 493 ಸ್ಟಾಲ್‌ಗ‌ಳನ್ನು ನಿರ್ಮಿಸಿ ಏಲಂ ಮಾಡಿದೆ. 25 ಸ್ಟಾಲ್‌ಗ‌ಳನ್ನು ಚರ್ಚ್‌ ವತಿಯಿಂದ ನೀಡಲಾಗಿದೆ. ಕಲ್ಲಂಗಡಿ, ಬೇಕರಿ, ಬಟ್ಟೆ ಅಂಗಡಿ, ಆಟಿಕೆ ಅಂಗಡಿಗಳು, ಐಸ್‌ಕ್ರೀಂ, ಜ್ಯೂಸ್‌ ಸ್ಟಾಲ್‌ ರಸ್ತೆ ಬದಿಯುದ್ದಕ್ಕೂ ಕಂಡುಬರುತ್ತಿದೆ. ಮನೋರಂಜನೆ ಉದ್ಯಾನವನ್ನು ಚರ್ಚ್‌ ಎದುರಿನ ಶಾಲಾ ವರಾಠದಲ್ಲಿ ಸ್ಥಾಪಿಸಲಾಗಿದೆ.

ಭದ್ರತೆ
ಭಕ್ತರ ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಚರ್ಚ್‌ ಪ್ರವೇಶ ದ್ವಾರದ ಬಳಿ ಪೊಲೀಸ್‌ ಚೌಕಿ ನಿರ್ಮಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ, ಸಿಪಿಐ, 8 ಪಿಎಸ್‌ಐ, 200 ಸಿವಿಲ್‌ ಪೊಲೀಸ್‌ ಹಾಗೂ 100 ಡಿಎಆರ್‌ ತುಕಡಿ, 50 ಮಂದಿ ಗೃಹರಕ್ಷಕ ಸಿಬಂದಿ ಅಲ್ಲದೇ 50 ಸ್ವಯಂಸೇವಕರು ಕರ್ತವ್ಯ ನಿರ್ವಹಿಸಲಿದ್ದಾರೆ. ಇವರೊಂದಿಗೆ ಬಾಂಬ್‌ ನಿಷ್ಕ್ರಿಯ ದಳ, ಉದ್ಘೋಷಣ ಕೇಂದ್ರ ತೆರೆಯಲಾಗಿದೆ. ಅತ್ತೂರು ಬಸಿಲಿಕಾದ ಒಳಗಡೆ ಹಾಗೂ ವಠಾರದಲ್ಲಿ ಒಟ್ಟು 64 ಸಿಸಿ ಕೆಮರಾ ಅಳವಡಿಸಲಾಗಿದೆ.

LEAVE A REPLY

Please enter your comment!
Please enter your name here