ಬ್ರಹ್ಮಾವರ: ಕರ್ಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾ.20ರಿಂದ 27ರ ವರೆಗೆ ಜರಗುವ ನೂತನ ಶಿಲಾಮಯ ಗರ್ಭಗುಡಿ, ಕಾಶಿ ವಿಶ್ವನಾಥ ಗುಡಿ, ಗೋಪಾಲಕೃಷ್ಣ ಗುಡಿ, ಸುತ್ತುಪೌಳಿ, ತೀರ್ಥ ಮಂಟಪ, ರಥಬೀದಿ, ಓಲಗ ಮಂಟಪ, ನಾಗಬನ ಸಮರ್ಪಣೆ, ಬ್ರಹ್ಮಕಲಶೋತ್ಸವ ಅಂಗವಾಗಿ ಪೂರ್ವಭಾವಿ ಸಭೆ ದೇಗುಲದ ವಠಾರದಲ್ಲಿ ಜರಗಿತು.
ಮಾ.20ರಂದು ಜರಗುವ ಹಸಿರು ಹೊರೆಕಾಣಿಕೆ, ಮಾ.21ರಂದು ನಡೆಯುವ ಮಾತೃ ಸಂಗಮ ಮಹಿಳಾ ಸಮಾವೇಶ, ಮಾ.23ರ ಪ್ರತಿಷ್ಠಾ ಕಾರ್ಯಕ್ರಮ, ಮಾ.24 ಮತ್ತು 25ರ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಮಾ.26ರಂದು ನಡೆಯುವ ಬ್ರಹ್ಮಕಲಶೋತ್ಸವ, ಆಳ್ವಾಸ್ ಸಾಂಸ್ಕೃತಿಕ ವೈಭವ ಕುರಿತು ಚರ್ಚಿಸಲಾಯಿತು.
ಮಾ.20ರಿಂದ 27ರ ವರೆಗೆ ಪ್ರತಿನಿತ್ಯ ನಡೆಯುವ ಅನ್ನಸಂತರ್ಪಣೆ, ಧಾರ್ಮಿಕ ಸಭಾ ಕಾರ್ಯಕ್ರಮ ಕುರಿತು ವಿಚಾರ ವಿನಿಮಯ ನಡೆಯಿತು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸರ್ವರೂ ಪಾಲ್ಗೊಳ್ಳುವಂತೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಅವರು ವಿನಂತಿಸಿದರು. ಸಮಾರಂಭವನ್ನು ಶ್ರದ್ಧಾ ಭಕ್ತಿಯಿಂದ ಆಯೋಜಿಸಿ, ಯಶಸ್ವೀಯಾಗಿ ನಿರ್ವಹಿಸುವರೇ ಕರೆ ನೀಡಿದರು. ಅರ್ಚಕರು, ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡರು.