ನೆಹರೂನಗರ: ಕಲ್ಲೇಗ ಶ್ರೀ ಕಲ್ಕುಡ ಮತ್ತು ಕಲ್ಲುರ್ಟಿ ದೈವಗಳ ಮೂಲಸ್ಥಾನವಾದ ಕಾರ್ಜಾಲು ಗ್ರಾಮದೈವ ಮತ್ತು ಧರ್ಮ ದೈವಗಳ ದೊಂಪದ ಬಲಿ ಜಾತ್ರೆ ಫೆ. 24ರಂದು ನಡೆಯಿತು.
ಬೆಳಗ್ಗೆ ಗಣಪತಿ ಹೋಮ, ಸ್ಥಳಶುದ್ಧಿ ಹೋಮ ಮತ್ತು ಕಲಶ ಪ್ರತಿಷ್ಠೆ ನಡೆಯಿತು. ರಾತ್ರಿ ಕಾರ್ಜಾಲು ಗುತ್ತಿನಿಂದ ಧೂಮಾವತಿ, ಕಲ್ಕುಡ ಮತ್ತು ಕಲ್ಲುರ್ಟಿ ದೈವಗಳ ಭಂಡಾರ ತೆಗೆದು ಗೋಂದಲ ಪೂಜೆ ಹಾಗೂ ದೈವಗಳ ದೊಂಪದ ಬಲಿ ನೇಮ ಜರಗಿತು. ಮಧ್ಯಾಹ್ನ ನಡೆದ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸುಮಾರು 5 ಸಾವಿರ ಮಂದಿ ಪಾಲ್ಗೊಂಡರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಕನ್ನಡ ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಪುತ್ತೂರು ಚಂದ್ರಶೇಖರ ಹೆಗ್ಡೆ ಅವರ ತಂಡದಿಂದ “ಪನ್ನೀರ್’ ತುಳು ಸಂಗೀತ ರಸಮಂಜರಿ ನಡೆಯಿತು.
ದೊಂಪದಬಲಿ ನೇಮ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ನಗರಸಭಾ ಸದಸ್ಯ ಜೀವಂಧರ್ ಜೈನ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಸಂಜೀವ ನಾಯಕ್ ಕಲ್ಲೇಗ, ದೊಂಪದ ಬಲಿ ನೇಮ ಸಮಿತಿಯ ಸದಸ್ಯರು ಮೇಲುಸ್ತುವಾರಿ ವಹಿಸಿದ್ದರು.