ಸುಳ್ಯ : ಕರಿಕ್ಕಳ ಪರಿಸರದ ಆರಾಧ್ಯದೇವಿ ಚಾಮುಂಡೇಶ್ವರಿ, ಜಲದುರ್ಗಾದೇವಿ, ನಾಗದೇವರು ಮತ್ತು ಪರಿವಾರ ದೈವಗಳ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ತೋರಣ ಮುಹೂರ್ತ ಸ್ಥಳ ಶುದ್ಧಿ ಹೋಮ, ಶ್ರೀ ಸತ್ಯನಾರಾಯಣ ದೇವರ ಪೂಜೆ, ನವಗ್ರಹ ಹೋಮ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು.
ಜ. 2ರಂದು ಮುಂಜಾನೆ ಶ್ರೀ ದೇವಿಗೆ ನವಕಲಶಾಭಿಷೇಕ, ಚಂಡಿಕಾ ಹೋಮ, ಹೂವಿನ ಪೂಜೆ, ಸಂಕಲ್ಪಗಳು ನಡೆಯಿತು. ಅನಂತರ ನಾಗದೇವರ ತಂಬಿಲ ಸೇವೆ
ಹಾಗೂ ಪರಿವಾರ ದೈವಗಳಿಗೆ ತಂಬಿಲ ಸೇವೆ ಮತ್ತು ಪೂರ್ಣಾಹುತಿ, ಮಹಾಪೂಜೆ, ಪ್ರಸನ್ನ ಪೂಜೆ ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ಅನಂತರ ಅನ್ನಸಂತರ್ಪಣೆ ನಡೆಯಿತು.