Home ಧಾರ್ಮಿಕ ಸುದ್ದಿ ಕರಾವಳಿ ಕರ್ನಾಟಕದ ಕೊಂಕಣಿ ಕೆಥೋಲಿಕರ:ಮೊಂತಿ ಫೆಸ್ಟ್

ಕರಾವಳಿ ಕರ್ನಾಟಕದ ಕೊಂಕಣಿ ಕೆಥೋಲಿಕರ:ಮೊಂತಿ ಫೆಸ್ಟ್

1556
0
SHARE

ರ್ಚುಗಲ್‌ನಿಂದ ಹೊರಟ ಸಂತ ಫ್ರಾನ್ಸಿಸ್‌ ಕ್ಸೇವಿಯರ್‌ ಅವರು 1542 ಮೇ 6 ರಂದು ಈಗಿನ ಹಳೇ ಗೋವಾಕ್ಕೆ ಬಂದು ತಲುಪಿದರು. ನಂತರದ ದಿನಗಳಲ್ಲಿ ಇನ್ನೂ ಕೆಲವು ಮಂದಿ ಯೇಸು ಸಭೆಯ ಮಿಶನರಿಗಳು ಬಂದು ಅವರನ್ನು ಸೇರಿಕೊಂಡರು. 1552ರಲ್ಲಿ ಡಚ್‌ ದೇಶದ ಯೇಸು ಸಭೆಯ ಫಾ| ಗಸ್ಪಾರ್‌ ಬಾರೆjàವುಸ್‌ (1515-1553) ಗೋವಾಕ್ಕೆ ಕಾಲಿಟ್ಟರು. ಫ್ರಾನ್ಸಿಸ್‌ ಕ್ಸೇವಿಯರ್‌ ಅವರು ಗಸ್ಪಾರ್‌ ಬಾರೆjàವುಸ್‌ ಅವರನ್ನು ಸೈಂಟ್‌ ಪಾವ್‌É ಕಾಲೇಜಿನ ರೆಕ್ಟರ್‌ ಹಾಗೂ ಪೂರ್ವ ವಲಯದ ಜೆಸುಯೆಟ್‌ ಪ್ರಾಂತದ ಉಪ ಪ್ರಾಂತೀಯ ಮುಖ್ಯಸ್ಥರನ್ನಾಗಿ ನೇಮಿಸಿದರು. ಕಾಲೇಜಿನಲ್ಲಿ ಸಂಗೀತ ಕಲಿಸುವ ವ್ಯವಸ್ಥೆಯನ್ನು ಕಲ್ಪಿಸಿದ ಅವರು ಮಾತೆ ಮೇರಿಯ ಜನ್ಮದಿನದಂದು ಮಕ್ಕಳಿಂದ ಪುಷ್ಪಾರ್ಚನೆ ಮಾಡುವ ಸಂಪ್ರದಾಯವನ್ನು ಆರಂಭಿಸಿದರು. ಇದರ ಬಗ್ಗೆ ರೋಮ್‌ನಲ್ಲಿದ್ದ ಯೇಸು ಸಭೆಯ ಮಹಾ ಮುಖ್ಯಸ್ಥರಿಗೆ ಬರೆದ ಪತ್ರಗಳಲ್ಲಿ ಉಲ್ಲೇಖಗಳಿವೆ.

ಸಪ್ಟೆಂಬರ್‌ 8
19ನೇ ಶತಮಾನದಲ್ಲಿ ಗೋವಾದ ತಿಸ್ವಾಡಿ ಎಂಬಲ್ಲಿ ಯೇಸು ಸಭೆಯ ಮಿಶನರಿಗಳು ಹಾಗೂ ಇನ್ನಿತರ ಧರ್ಮ ಪ್ರಚಾರಕರು ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡಿದರು. ಈಗಿನ ಹಳೆಯ ಗೋವಾದ ಬೆಟ್ಟದಲ್ಲಿ 1519ರಲ್ಲಿ ಆ´ೋನ್ಸೊ ಆಲುºಕರ್ಕ್‌ ಎಂಬವರು ಮಾತೆ ಮೇರಿಯ ಗೌರವಾರ್ಥವಾಗಿ ಬೆಟ್ಟದ ನಮ್ಮ ಮಾತೆಯ ಮಂದಿರ ಎಂಬ ಚಿಕ್ಕ ಚರ್ಚ್‌ವೊಂದನ್ನು ಕಟ್ಟಿಸಿದರು. ಪೋರ್ಚುಗೀಸ್‌ ಭಾಷೆಯಲ್ಲಿ ಮೋಂತೆ ಎಂದರೆ ಬೆಟ್ಟ ಎಂದರ್ಥ. ಈಗಲೂ ನಾವು ಅಲ್ಲಿ ಈ ಪುರಾತನ ಮಂದಿರವನ್ನು ಕಾಣಬಹುದು. ಅಂದಿನ ಕಾಲದಲ್ಲಿ ಸೆಪ್ಟೆಂಬರ್‌ 8ರಂದು ಮಾತೆ ಮೇರಿಯ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದರು. ಈಗ ಈ ಹಬ್ಬವನ್ನು ಸೆಪ್ಟೆಂಬರ್‌ 8ರ ನಂತರದ ರವಿವಾರದಂದು ಆಚರಿಸುತ್ತಾರೆ.

ತಿಸ್ವಾಡಿಯ ಜನರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಬಳಿಕ 1552 ರಲ್ಲಿ ಫಾ| ಬಾಲ್ತಜಾರ್‌ ಅವರು ಮೊಂತಿ ಹಬ್ಬದ ನೊವೆನಾ ಪ್ರಾರ್ಥನೆ ವೇಳೆ ಮಕ್ಕಳಿಗೆ ಹೂವುಗಳನ್ನು ಸಂಗ್ರಹಿಸಿ ಬಾಲೆ ಮೇರಿಗೆ ಪುಷ್ಪಾರ್ಚನೆ ಮಾಡುವ ವಿಧಾನವನ್ನು ಹೇಳಿ ಕೊಟ್ಟರು ಎಂದು ಕೆಲವೊಂದು ಉಲ್ಲೇಖಗಳಿಂದ ತಿಳಿದು ಬರುತ್ತದೆ.

ಕೆನರಾದಲ್ಲಿ ಕ್ರೈಸ್ತರು
ಬೇರೆ ಬೇರೆ ಕಾರಣಗಳಿಗಾಗಿ ಗೋವಾದ ಕ್ರೈಸ್ತರು 16, 17, 18 ಹಾಗೂ 19ನೇ ಶತಮಾನಗಳಲ್ಲಿ ಕೆನರಾ ಪ್ರದೇಶಕ್ಕೆ ವಲಸೆ ಬಂದು ವಾಸ್ತವ್ಯ ಹೂಡಿದರು. ಈ ಕ್ರೈಸ್ತರು ಗೋವಾದ ಮಹಾಧರ್ಮಕ್ಷೇತ್ರದ ಅಧೀನದಲ್ಲಿದ್ದರು. ಹಾಗಾಗಿ ಗೋವಾದ ಪಾದ್ರಿಗಳು ಕೆನರಾಕ್ಕೆ ಬಂದು ಕ್ರೈಸ್ತರಿಗೆ ಅಧ್ಯಾತ್ಮಿಕ ಸೇವೆ ಒದಗಿಸುತ್ತಿದ್ದರು. ಅಲ್ಲಿ ಮೊಂತಿ ಫೆಸ್ತ್ ಆಚರಣೆಯಲ್ಲಿ ಕೆಲವು ಬದಲಾವಣೆಗಳನ್ನು ತಂದರು. ತೆನೆಗಳ ಆಶೀರ್ವಚನದ ಬಳಿಕ ಕಬ್ಬು ವಿತರಿಸುವುದು, ಹೊಸ ಊಟವನ್ನು ಸೇವಿಸುವುದು ಇತ್ಯಾದಿ ಸಂಪ್ರದಾಯಗಳನ್ನು ಹುಟ್ಟು ಹಾಕಿದರು. 19ನೇ ಶತಮಾನದಲ್ಲಿ ಇಟೆಲಿಯಿಂದ ಮಂಗಳೂರು ನಗರಕ್ಕೆ ತಂದ ಮರಿಯಾ ಬಂಬಿನಾ (ಬಾಲೆ ಮರಿಯಾ) ವಿಗ್ರಹವನ್ನಿಟ್ಟು ಹೂವುಗಳನ್ನು ಅರ್ಪಿಸುವ ಸಂಪ್ರದಾಯ ಆರಂಭವಾಯಿತು. ಕೆನರಾ ಕ್ರೈಸ್ತ ಸಮುದಾಯದಲ್ಲಿ ಪ್ರದೇಶ ಮತ್ತು ಸಂಸ್ಕೃತಿಗೆ ಅನುಗುಣವಾಗಿ ಮೊಂತಿ ಹಬ್ಬದ ಆಚರಣೆಯ ವಿಧಾನ ಬದಲಾಗುತ್ತಾ ಇದೆ. ಕೆಲವರು ಸೆ. 8ರ ನಂತರದ ರವಿವಾರದಂದು ಮೊಂತಿ ಹಬ್ಬವನ್ನು ಆಚರಿಸುತ್ತಾರೆ. ಬಾಳೆ ಎಲೆಯ ಬದಲು ಪ್ಲೇಟಿನಲ್ಲಿ ಊಟ ಸೇವಿಸುತ್ತಾರೆ.

ಫರಂಗಿಪೇಟೆಯಲ್ಲಿ

ಇತಿಹಾಸದ ಪ್ರಕಾರ ಪೋರ್ಚುಗಲ್‌ನಿಂದ ಹೊರಟ ಕೆಲವು ಫ್ರಾನ್ಸಿಸ್ಕನ್‌ ಮಿಶನರಿ ಪಾದ್ರಿಗಳು ಮಂಗಳೂರಿಗೆ ಆಗಮಿಸಿ ಮೂರು ಸ್ಥಳಗಳಲ್ಲಿ ಮೂರು ಚರ್ಚ್‌ಗಳನ್ನು ಸ್ಥಾಪಿಸಿದರು. ಮೊದಲನೆಯದು ಬೋಳಾರದಲ್ಲಿ ರೊಸಾರಿಯೋ ಚರ್ಚ್‌, ಎರಡನೆಯದು ಉಳ್ಳಾಲದಲ್ಲಿ (ಪಾನಿರ್‌) ಮೆರ್ಸಿನ್‌ ಮಾತೆಯ ಚರ್ಚ್‌ ಹಾಗೂ ಮೂರನೆಯದು ಫರಂಗಿಪೇಟೆಯಲ್ಲಿ ಸಂತ ಫ್ರಾನ್ಸಿಸ್‌ ಆಸಿಸಿ ಚರ್ಚ್‌. 1526ರಲ್ಲಿ ಇಲ್ಲೊಂದು ಗುರುಮಠ ನಿರ್ಮಿಸಲಾಯಿತು ಎಂದು ಇತಿಹಾಸ ತಿಳಿಸುತ್ತದೆ.

ಬಾಲೆ ಮೇರಿ ಪ್ರತಿಮೆ
ಪುಟ್ಟ ಗಾಜಿನ ಪೆಟ್ಟಿಗೆಯಲ್ಲಿ ಇರಿಸಿದ ಇಟೆಲಿ ದೇಶದಿಂದ ತರಿಸಿದ ಬಾಲೆ ಮೇರಿಯ ಚಿಕ್ಕ ಪ್ರತಿಮೆಯೊಂದು ನೆಲ್ಯಾಡಿಯ ಒಂದು ಮಲೆಯಾಳಿ ಕುಟುಂಬದ ಮನೆಯಲ್ಲಿತ್ತು. ಈ ವಿಗ್ರಹವನ್ನು ಯಾವುದಾದರೊಂದು ಚರ್ಚ್‌ಗೆ ನೀಡಬೇಕೆಂದು ಅವರು ಯೋಚಿಸಿದ್ದರು. ಇದನ್ನರಿತ ಕೆಥೋಲಿಕ್‌ ಕುಟುಂಬವೊಂದು, ಪ್ರತೀ ರವಿವಾರ ಬೆಳಗ್ಗೆ ಫರಂಗಿಪೇಟೆಯ ಮೋಂತೆ ಮರಿಯಾನೊ ಚರ್ಚ್‌ನಲ್ಲಿ ಬಾಲೆ ಮೇರಿಯ ನೊವೆನಾ ಪ್ರಾರ್ಥನೆ ನಡೆಯುತ್ತಿದ್ದುದರಿಂದ ಆ ಚಿಕ್ಕ ವಿಗ್ರಹವನ್ನು ಅಲ್ಲಿಗೆ ಕೊಟ್ಟರೆ ಒಳ್ಳೆಯದು ಎಂದು ಸಲಹೆ ನೀಡಿದರು. ಅದರಂತೆ ಬಾಲೆ ಮೇರಿಯ ವಿಗ್ರಹವನ್ನು ಮೋಂತೆ ಮರಿಯಾನೊ ಚರ್ಚ್‌ಗೆ ನೀಡಿದರು. ಇದೀಗ ಚರ್ಚ್‌ನ ಸನಿಹದಲ್ಲೇ ಚಿಕ್ಕ ಮಂದಿರವೊಂದನ್ನು ನಿರ್ಮಿಸಿ ಬಾಲೆ ಮೇರಿಯ ವಿಗ್ರಹವನ್ನು ಅಲ್ಲಿ ಪ್ರತಿಷ್ಟಾಪಿಸಲಾಗಿದೆ.
ಆಚರಣೆ ಹೀಗೆ ಚರ್ಚ್‌ಗಳಲ್ಲಿ ಆಶೀರ್ವಚನ ಮಾಡಿದ ಭತ್ತದ ತೆನೆಯನ್ನು ಮನೆಗೆ ತಂದು, ಭತ್ತ ಸುಲಿದು ಕೆಲವು ಅಕ್ಕಿ ಕಾಳುಗಳನ್ನು ಹಾಲು/ ರಸಾಯನ/ ಪಾಯಸದಲ್ಲಿ ಬೆರೆಸಿ ಮನೆ ಮಂದಿಯೆಲ್ಲರೂ ಸೇವಿಸುತ್ತಾರೆ. ಹಬ್ಬದೂಟಕ್ಕೆ ಬಾಳೆ ಎಲೆಯ ಬದಲು ಪ್ಲೇಟುಗಳನ್ನು ಉಪಯೋಗಿಸುತ್ತಾರೆ. ಸಸ್ಯಾಹಾರಿ ಊಟವಿದ್ದರೂ ಕೆಲವು ಪ್ರದೇಶಗಳಲ್ಲಿ ಮೀನು ಅಥವಾ ಮಾಂಸದ ಖಾದ್ಯಗಳಿರುತ್ತವೆ. ಆದರೆ ಅದು ಬಲು ಅಪರೂಪ.

ಕೌಟುಂಬಿಕ ಹಬ್ಬ
ಒಟ್ಟಿನಲ್ಲಿ ಕರ್ನಾಟಕ ಕರಾವಳಿಯ ಕೊಂಕಣಿ ಕೆಥೋಲಿಕರು ಆಚರಿಸುವ ಮೊಂತಿ ಫೆಸ್ತ್ ಅಥವಾ ಮರಿಯಾ ಜಯಂತಿ ಕುಟುಂಬದ ಸದಸ್ಯರನ್ನೆಲ್ಲಾ ಒಟ್ಟುಗೂಡಿಸುವ ಒಂದು ವಿಶಿಷ್ಟ ಕೌಟುಂಬಿಕ ಹಬ್ಬ ಎನ್ನುವುದರಲ್ಲಿ ಎರಡು ಮಾತಿಲ್ಲ.

LEAVE A REPLY

Please enter your comment!
Please enter your name here