ಕಾಪು : ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಶ್ರೀ ದೇವಿಯ ಸನ್ನಿಧಿಯಲ್ಲಿ ವರ್ಷಂಪ್ರತಿ ವಿಶೇಷವಾಗಿ ಜರಗುವ ಮಹಾ ಚಂಡಿಕಾಯಾಗ, ಸಾರ್ವಜನಿಕ ಅನ್ನ ಸಂತರ್ಪಣೆಯು ಅ. 23 ರಂದು ಸಂಪನ್ನಗೊಂಡಿತು.
ಅರ್ಚಕ ವೇ| ಮೂ| ಕಮಲಾಕ್ಷÒ ಭಟ್ ಅವರ ಪ್ರಾರ್ಥನೆಯೊಂದಿಗೆ ಆರಂಭ ಗೊಂಡು ವೈದಿಕರಿಂದ ಯಜ್ಞದ ವಿವಿಧ ಧಾರ್ಮಿಕ ಕಾರ್ಯಕ್ರಮ, ಪೂರ್ಣಾಹುತಿ, ನವದುರ್ಗಾ ಪೂಜೆ, ಪಾರಾಯಣ ಪೂಜೆ, ಪಲ್ಲ ಪೂಜೆ, ಅನ್ನಸಂತರ್ಪಣೆ, ದರ್ಶನ ಸೇವೆ, ಮೊದಲಾದ ಕಾರ್ಯಕ್ರಮ ಜರಗಿದವು. ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿ, ಕಾಪು ಪೇಟೆಯ ಹತ್ತು ಸಮಸ್ತರು, ಊರ ಪರವೂರ ಸೀಮೆಯವರು ಮತ್ತು ಭಕ್ತರು ಪಾಲ್ಗೊಂಡಿದ್ದರು.