ಕಾಪು: ಮಹತೋಭಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನದೇವಸ್ಥಾನದ ವಾರ್ಷಿಕ ಮಹೋತ್ಸವವು ಫೆ. 13ರಿಂದ 22ರ ವರೆಗೆ ನಡೆಯಲಿದೆ. ಫೆ. 18ರಂದು ಶ್ರೀಮನ್ಮಹಾರಥೋತ್ಸವ ಜರಗುವುದು.
ಫೆ. 13ರಂದು ಧ್ವಜಾರೋಹಣದೊಂದಿಗೆ ವಾರ್ಷಿಕ ಉತ್ಸವಕ್ಕೆ ಚಾಲನೆ ದೊರಕಿತು. ಫೆ. 14ರಂದು ರಾತ್ರಿ ತಪ್ಪಂಗಾಯಿ ಬಲಿ, ಫೆ. 15ರಂದು ರಾತ್ರಿ ತೆಂಕುಸವಾರಿ, ಫೆ. 16ರಂದು ರಾತ್ರಿ ಕೆರೆ ಉತ್ಸವ, ಫೆ. 17ರಂದು ರಾತ್ರಿ ಸಾಲು ಕಟ್ಟೆ ಪೂಜೆ ನಡೆಯಲಿದೆ.
ಫೆ. 18ರಂದು ಬೆಳಗ್ಗೆ 10.45ಕ್ಕೆ ರಥಾರೋಹಣ, ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ರಾತ್ರಿ 8ಕ್ಕೆ ಶ್ರೀಮನ್ಮಹಾರಥೋತ್ಸವ, ಫೆ. 19ರಂದು ಬೆಳಗ್ಗೆ ಕವಾಟೋದ್ಘಾಟನೆ, ಸಂಜೆ 4ರಿಂದ ಕಟ್ಟೆ ಪೂಜೆ, ಓಕುಳಿ, ಬಡಗು ಸವಾರಿ, ದಂಡತೀರ್ಥ ಮಠದ ಕೆರೆಯಲ್ಲಿ ಅವಭೃಥ ಸ್ನಾನ, ತೂಟೆದಾರ, ಧ್ವಜಾವರೋಹಣ, ಫೆ. 20ರಂದು ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ, ಫೆ.22ರಂದು ದೇಗುಲದ ನಾಗಬನದಲ್ಲಿ ಆಶ್ಲೇಷಾ ಬಲಿ ಸೇವೆ, ಸಮಾರಾಧನೆ ನಡೆಯಲಿದೆ ಎಂದು ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ಎಂ. ಬಂಗೇರ ಮತ್ತು ಕಾರ್ಯನಿರ್ವಹಣಾಧಿಕಾರಿ ರವಿಶಂಕರ್ ಕೆ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.