Home ಧಾರ್ಮಿಕ ಸುದ್ದಿ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇಗುಲ ರಥೋತ್ಸವ

ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇಗುಲ ರಥೋತ್ಸವ

1584
0
SHARE

ಕಾಪು : ಮಹತೋಭಾರ ಕಾಪು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಮಂಗಳವಾರ ಮಧ್ಯಾಹ್ನ ಮಾರಿಯಮ್ಮ ದೇವಿಯ ಭೇಟಿ ಸಹಿತವಾಗಿ ಹಗಲು ರಥೋತ್ಸವ ನಡೆಯಿತು.

ಪ್ರಧಾನ ತಂತ್ರಿ ವೇ| ಮೂ| ಕಲ್ಯ ಶ್ರೀಶ ತಂತ್ರಿಗಳ ನೇತೃತ್ವದಲ್ಲಿ ಅರ್ಚಕ ವೇ|
ಮೂ| ನಾರಾಯಣ ತಂತ್ರಿಗಳ ಉಪಸ್ಥಿತಿಯಲ್ಲಿ ಬಲಿ ಉತ್ಸವ, ಪಲ್ಲಪೂಜೆ ಮತ್ತು ರಥಾರೋಹಣ ಇತ್ಯಾದಿ ಸಂಪನ್ನಗೊಂಡವು. ಮಹಾಅನ್ನಸಂತರ್ಪಣೆಯಲ್ಲಿ ಏಳು ಸಾವಿರಕ್ಕೂ ಅಧಿಕ ಮಂದಿ ಭಕ್ತರು ಪಾಲ್ಗೊಂಡಿದ್ದರು.

ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ ಎಂ. ಬಂಗೇರ, ಕಾರ್ಯನಿರ್ವಹಣಾಧಿಕಾರಿ ರವಿಶಂಕರ್‌ ಕೆ., ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿಧರ್‌ ಎಂ. ಶೆಟ್ಟಿ ಎರ್ಮಾಳ್‌, ರಾಶಿ ಪೂಜಾ ಮಹೋತ್ಸವ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಗಣ್ಯರಾದ ಕೆ.ಪಿ. ಆಚಾರ್ಯ, ಡಾ| ಕೆ. ಪ್ರಭಾಕರ ಶೆಟ್ಟಿ, ಸುಬ್ರಹ್ಮಣ್ಯ ಶೆಟ್ಟಿ ಮಲ್ಲಾರುಗುತ್ತು, ಸುರೇಶ್‌ ಶೆಟ್ಟಿ ಗುರ್ಮೆ, ಮನೋಹರ್‌ ಶೆಟ್ಟಿ ಕಾಪು, ಕಾಪು ದಿವಾಕರ ಶೆಟ್ಟಿ, ರಮೇಶ್‌ ಹೆಗ್ಡೆ ಕಲ್ಯ, ರತ್ನಾಕರ ಹೆಗ್ಡೆ ಕಲೀಲಬೀಡು, ನಡಿಕೆರೆ ರತ್ನಾಕರ ಶೆಟ್ಟಿ, ಮಾಧವ ಆರ್‌. ಪಾಲನ್‌, ಗಂಗಾಧರ ಸುವರ್ಣ, ಸಖೇಂದ್ರ ಸುವರ್ಣ, ವಿಕ್ರಂ ಕಾಪು, ಶ್ರೀಕರ ಶೆಟ್ಟಿ ಕಲ್ಯ, ಶ್ರೀಧರ ಶೆಣೈ, ಪ್ರಸಾದ್‌ ಜಿ. ಶೆಣೈ, ಯೋಗೀಶ್‌ ಶೆಟ್ಟಿ ಬಾಲಾಜಿ, ಶೇಖರ್‌ ಆಚಾರ್ಯ, ಸುರೇಶ್‌ ಶೆಟ್ಟಿ ಅಯೋಧ್ಯಾ, ಶೇಖರ್‌ ಸಾಲ್ಯಾನ್‌, ಉಮೇಶ್‌ ದೇವಾಡಿಗ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ದೇವರಾಜ್‌ ತೊಟ್ಟಂ, ಉಮೇಶ್‌ ಪೂಜಾರಿ, ರಮಾ ವೈ. ಶೆಟ್ಟಿ, ಸರೋಜಿನಿ ಶೆಟ್ಟಿ, ಎಂ. ಕುಟ್ಟಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here