Home ಧಾರ್ಮಿಕ ಸುದ್ದಿ ಆನೆಗುಂದಿ ಶ್ರೀಗಳ ಚಾತುರ್ಮಾಸ್ಯ: ವೈದಿಕ ಸಮಾವೇಶ ಸಂಪನ್ನ

ಆನೆಗುಂದಿ ಶ್ರೀಗಳ ಚಾತುರ್ಮಾಸ್ಯ: ವೈದಿಕ ಸಮಾವೇಶ ಸಂಪನ್ನ

1455
0
SHARE

ಕಾಪು : ಆನೆಗುಂದಿ ಮಹಾಸಂಸ್ಥಾನದಲ್ಲಿ ವೇದ ಮತ್ತು ಶಾಸ್ತ್ರಗಳ ಅಧ್ಯಯನಕ್ಕಾಗಿ ಪಾಠ ಶಾಲೆಯನ್ನು ಮುಂದೆ ಪ್ರಾರಂಭಿಸಲಾಗುತ್ತಿದ್ದು , ವಿದ್ವತ್‌ ಗೋಷ್ಠಿಗಳನ್ನು ಕೂಡಾ ಆಯೋಜಿಸಲಾಗುವುದು, ಸಂಸ್ಥಾನದ ಶ್ರೀ ನಾಗಧರ್ಮೇಂದ್ರ ಸರಸ್ವತೀ ವೇದ ಸಂಜೀವಿನೀ ಪಾಠಶಾಲೆಯಲ್ಲಿ ಋಗ್ವೇದ ಸಂಹಿತೆಯ ಪಾಠವನ್ನು ನಡೆಸಲಾಗುತ್ತಿದೆ. ಭಾರತೀಯ ಧಾರ್ಮಿಕ ಸಂಸ್ಕೃತಿ ಪರಂಪರೆಯನ್ನು ಸಮಾಜದಲ್ಲಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗುರುಕುಲ ಪದ್ದತಿಯ ಶಿಕ್ಷಣವನ್ನು ಮಹಾಸಂಸ್ಥಾನದಲ್ಲಿ ನೀಡಲಾಗುತ್ತಿದ್ದು ಸಮಾಜ ಭಾಂದವರು ಹೆಚ್ಚಿನ ಪ್ರೋತ್ಸಾಹ ಮತ್ತು ಸಹಕಾರವನ್ನು ನೀಡಬೇಕು ಎಂದು ಶ್ರೀಮತ್‌ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.

ಪಡುಕುತ್ಯಾರು ಶ್ರೀಮತ್‌ ಆನೆಗುಂದಿ ಮಹಾಸಂಸ್ಥಾನದಲ್ಲಿ ತಮ್ಮ 15ನೇ ವರ್ಷದ ವಿಕಾರಿ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಆಯೋಜಿಸಲಾದ ವೈದಿಕ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿದರು.

ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸರಾದ ಜ್ಯೋತಿಷ್ಯ ವಿದ್ವಾನ್‌ ಉಮೇಶ ಆಚಾರ್ಯ ಪಡೀಲು ಮಾತನಾಡಿದರು.ವೇ| ಮೂ| ಬ್ರಹ್ಮಶ್ರೀ ಶ್ರೀಧರ ಶರ್ಮಾ ಕಟಪಾಡಿ ಅಧ್ಯಕ್ಷತೆ ವಹಿಸಿದ್ದರು. ವೇ| ಮೂ| ಬ್ರಹಶ್ರೀ ಶಂಕರಾಚಾರ್ಯ ಕಡ್ಲಾಸ್ಕರ್‌ ಪಂಡಿತ್‌, ವೇ| ಮೂ| ಬ್ರಹ್ಮಶ್ರೀ ಸೀತಾರಾಮ ಶಾಸ್ತ್ರಿ ಉಪನ್ಯಾಸ ನೀಡಿದರು. ಆನೆಗುಂದಿ ಪಂಚಸಿಂಹಾಸನ ವಿಕಾಸ ಸಮಿತಿ ಉಪಾಧ್ಯಕ್ಷ ವಿದ್ಯಾನಗರ ಗಿಣಿಗೇರಿ ಮಠ ವೇ| ಮೂ| ಬ್ರಹ್ಮಶ್ರೀ ಸುಬ್ಬಣ್ಣ ಆಚಾರ್‌ ಶುಭಾಶಂಸನೆ ಮಾಡಿದರು.

ವಿವಿಧ ವಿಷಯಗಳಲ್ಲಿ ಪ್ರಾವೀಣ್ಯ ಪಡೆದ ವಿದ್ವಾನ್‌ ಚಂದ್ರಕಾಂತ ಶರ್ಮಾ ಹೆಬ್ರಿ (ಜ್ಯೋತಿಷ್ಯ), ವಿದ್ವಾನ್‌ ಯಶವಂತ ಶರ್ಮಾ ಮೂಡಬಿದ್ರೆ (ಅಲಂಕಾರ ಶಾಸ್ತ್ರ ),ವಿದ್ವಾನ್‌ ಚಂದ್ರಶೇಖರ ಶರ್ಮಾ ಮೈಸೂರು (ವ್ಯಾಕರಣಶಾಸ್ತ್ರ), ವಿದ್ವಾನ್‌ ಸೀತಾರಾಮ ಶರ್ಮಾ ಮುದ್ದೂರು (ಮೀಮಾಂಸ ಶಾಸ್ತ್ರ), ವಿದ್ವಾನ್‌ ಚಂದ್ರೇಶ ಶರ್ಮಾ ಹಾಸನ (ವ್ಯಾಕರಣಶಾಸ್ತ್ರ ) ಇವರಿಗೆ ಜಗದ್ಗುರುಗಳು ಅಭಿನಂದಿಸಿದರು.

ಕುಂಬಳೆ ಪುಜೂರು ವೇ| ಮೂ| ಹರಿಶ್ಚಂದ್ರ ಆಚಾರ್ಯ ಅವರು ತಮಗೆ ದೊರೆತ ಗುರುಕಾಣಿಕೆಯಲ್ಲಿ 61 ಸಾವಿರ ರೂ.ಗಳನ್ನು ಕುಲ ಗುರುಗಳಿಗೆ ಸಮರ್ಪಿಸಿದರು.

ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಅಧ್ಯಕ್ಷ ಬಿ. ಸೂರ್ಯಕುಮಾರ್‌ ಆಚಾರ್ಯ, ಚಾತುರ್ಮಾಸ್ಯ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ, ಗೌರವ ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಎಂ.ಬಿ ಆಚಾರ್‌, ಕೋಶಾಧಿಕಾರಿ ಬಂಬ್ರಾಣ ಯಜ್ಞೇಶ ಆಚಾರ್ಯ, ಪ್ರಧಾನ ಕಾರ್ಯದರ್ಶಿ ನಾಗರಾಜ ಆಚಾರ್ಯ, ಕಾರ್ಯದರ್ಶಿಗಳಾದ ಕೆ.ಎಂ ಗಂಗಾಧರ ಆಚಾರ್ಯ, ಸುರೇಶ್‌ ಆಚಾರ್ಯ, ಪ್ರಶಾಂತ ಆಚಾರ್ಯ, ವಿಶ್ವಸ್ಥರಾದ ಎನ್‌. ಪರಮೇಶ್ವರ ಆಚಾರ್ಯ, ಕೆ. ಕೇಶವ ಆಚಾರ್ಯ, ನವೀನ್‌ ಆಚಾರ್ಯ, ಯೋಗೀಶ್‌ ಆಚಾರ್ಯ, ಕಾಂತರಾಜ ಆಚಾರ್ಯ, ಚಿಕ್ಕಣ್ಣ ಆಚಾರ್ಯ, ಬೆಂಗಳೂರು ನಗರ್ತರಿ ಪೇಟೆಯ ನಂದಗೋಪಾಲ್ ಆಚಾರ್ಯ, ವಾಸುದೇವ ಆಚಾರ್ಯ, ವಿವಿಧ ಸಮಿತಿಗಳ ಮುಖ್ಯಸ್ಥರಾದ ಜಯಕರ ಆಚಾರ್ಯ, ವೈ. ಧರ್ಮೇಂದ್ರ ಆಚಾರ್ಯ, ರತ್ನಾಕರ ಆಚಾರ್ಯ , ಕನ್ಯಾನ ಜನಾರ್ದನ ಆಚಾರ್ಯ, ರೂಪೇಶ್‌ ಆಚಾರ್ಯ ಮಂಚಕಲ್, ಮದುಸೂದನ ಆಚಾರ್ಯ, ಲೋಲಾಕ್ಷ ಆಚಾರ್ಯ, ವೈದಿಕ ವಿದ್ವಾಂಸರಾದ ವಿಶ್ವನಾಥ ಪುರೋಹಿತ್‌, ಉಮೇಶ ತಂತ್ರಿ, ವಿದ್ಯಾಶಂಕರ ಪುರೋಹಿತ್‌, ಕೆ.ಜೆ. ವಿಶ್ವೇಶ್ವರ ಪುರೋಹಿತ್‌, ಎಂ. ಲೋಕೇಶ್‌ ಪುರೋಹಿತ್‌, ಪಿ. ನಾರಾಯಣ ಪುರೋಹಿತ್‌, ಮೋಹನ ಪುರೋಹಿತ್‌, ಜನಾರ್ಧನ ಪುರೋಹಿತ್‌ ಹಾಗೂ ವೈದಿಕರು ಉಪಸ್ಥಿತರಿದ್ದರು.

ಸಮಾವೇಶದ ಸಂಚಾಲಕ ವೇ| ಮೂ| ಅಕ್ಷಯ ಶರ್ಮಾ ಸ್ವಾಗತಿಸಿದರು. ವೇ| ಮೂ| ಬ್ರಹ್ಮಶ್ರೀ ಲಕ್ಷ್ಮೀಕಾಂತ ಶರ್ಮಾ ಪ್ರಸ್ತಾವನೆಗೈದರು. ವಿದ್ವಾನ್‌ ಪ್ರಕಾಶ್‌ ಶರ್ಮಾ, ವಿದ್ವಾನ್‌ ಹರಿಶ್ಚಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here