ಕಾಪು: ಭಗವಂತ ಪ್ರತಿಯೊಬ್ಬರ ಹೃದಯದಲ್ಲೂ ಇದ್ದಾನೆ. ಇನ್ನೊಬ್ಬನಿಗೆ ದುಃಖ ನೀಡದೆ, ಆತನ ಹೃದಯದಲ್ಲಿರುವ ಭಗವಂತನ ಪೂಜೆ ಮಾಡುವುದು ಇಂದಿನ ಅಗತ್ಯವಾಗಿದೆ. ನಾವು ನಡೆಸುವ ಹೃದಯಗಳನ್ನು ಗೆಲ್ಲುವ ಪ್ರಯತ್ನಕ್ಕೆ ದೇಗುಲದಲ್ಲಿರುವ ಭಗವಂತ ಪ್ರೇರಣೆ ನೀಡುತ್ತಾನೆ ಎಂದು ಪೇಜಾವರ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ಶ್ರೀಪಾದರು ಹೇಳಿದರು.
ಸುಮಾರು 4.50 ಕೋ. ರೂ. ವೆಚ್ಚದಲ್ಲಿ ಶಿಲಾಮಯವಾಗಿ ನಿರ್ಮಾಣಗೊಂಡಿರುವ ಜಲಂಚಾರು ಶ್ರೀ ಮಹಾಲಿಂಗೇಶ್ವರ – ಮಹಾಗಣಪತಿ ದೇಗುಲದ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಕರಾವಳಿಯ ದೇಗುಲಗಳ ಜೀರ್ಣೋದ್ಧಾರದಲ್ಲಿ ತುಳುನಾಡ ಕನ್ನಡಿಗರು ಮತ್ತು ಮುಂಬಯಿಗರ ಸಹಕಾರ ಸ್ಮರಣೀಯವಾಗಿದೆ. ಜನರ ಸಹಕಾರಕ್ಕೆ ಪೂರಕವಾಗಿ ಸರಕಾರದ ಸಹಾಯಹಸ್ತವನ್ನೂ ದೊರಕಿಸಿ ಕೊಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ದೇಗುಲದ ತಂತ್ರಿ ವೇ|ಮೂ| ಉದಯ ತಂತ್ರಿ, ಸಮಾಜ ಸೇವಕ ಸುರೇಶ್ ಪಿ. ಶೆಟ್ಟಿ ಗುರ್ಮೆ, ಧಾರ್ಮಿಕ ಚಿಂತಕ ಕೆಎಲ್ ಕುಂಡಂತಾಯ, ಮನೋಜ್ ಶೆಟ್ಟಿ ಮುಂಬಯಿ, ನರಸಿಂಹ ತಂತ್ರಿ ಬೆಂಗಳೂರು, ಮುಂಬಯಿ ಹೊಟೇಲ್ ಉದ್ಯಮಿಗಳಾದ ರಘುರಾಮ್ ಶೆಟ್ಟಿ, ರವೀಂದ್ರ ಅರಸ್, ದೇವಿಪ್ರಸಾದ್ ಕನ್‌ಸ್ಟ್ರಕ್ಷನ್‌ನ ವಾಸುದೇವ ಶೆಟ್ಟಿ, ಮುಂಬಯಿ ಆಹಾರ್‌ನ ಮಾಜಿ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಪೂನಾದ ಉದ್ಯಮಿ ಪ್ರವೀಣ್ ಶೆಟ್ಟಿ, ಉಳಿಯಾರು ದೇಗುಲ ಆಡಳಿತ ಮೊಕ್ತೇಸರ ತ್ರಿವಿಕ್ರಮ ಭಟ್, ಕರಂದಾಡಿ ದೇಗುಲದ ಆಡಳಿತ ಮೊಕ್ತೇಸರ ಉದಯ ಶೆಟ್ಟಿ, ಮಜೂರು ದೇಗುಲದ ಆಡಳಿತ ಮೊಕ್ತೇಸರ ಜೀವನ್‌ಪ್ರಕಾಶ್ ಶೆಟ್ಟಿ, ಜಲಂಚಾರು ದೇಗುಲದ ಆಡಳಿತ ಮೊಕ್ತೇಸರ ಗೋಪಾಲ ಶೆಟ್ಟಿ, ತಾ.ಪಂ. ಸದಸ್ಯೆ ಶಶಿಪ್ರಭಾ ಶೆಟ್ಟಿ, ಮಜೂರು ಗ್ರಾ.ಪಂ. ಅಧ್ಯಕ್ಷ ಸಂದೀಪ್ ರಾವ್, ಪಿ. ಗಣ್ಯರಾದ ವಿಟuಲದಾಸ ತಂತ್ರಿ, ಪದ್ಮನಾಭ ಶ್ಯಾನುಭಾಗ್, ಲೀಲಾಧರ ಶೆಟ್ಟಿ ಕರಂದಾಡಿ, ಭಾಸ್ಕರ್ ಶೆಟ್ಟಿ ಅಂಡೆಮಾರುಗುತ್ತು, ಆರ್.ವಿ. ಶೆಟ್ಟಿ ಅತಿಥಿಗಳಾಗಿದ್ದರು.
ಜಲಂಚಾರು ದೇಗುಲದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಪಂಜಿತ್ತೂರುಗುತ್ತು ರವಿರಾಜ್ ಶೆಟ್ಟಿ, ಅಧ್ಯಕ್ಷ ರಘುರಾಮ್ ಶೆಟ್ಟಿ, ಕಾರ್ಯದರ್ಶಿ ವೇಣುಗೋಪಾಲ ತಂತ್ರಿ, ಕೋಶಾಧಿಕಾರಿ ಅರುಣ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಜೊತೆ ಕಾರ್ಯದರ್ಶಿ ಜಲಂಚಾರು ರಘುಪತಿ ತಂತ್ರಿ ಪ್ರಸ್ತಾವಿಸಿದರು. ಅರುಣ್ ಶೆಟ್ಟಿ ಪಾದೂರು ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ನಿರ್ಮಲ್ ಕುಮಾರ್ ಶೆಟ್ಟಿ ನಿರೂಪಿಸಿದರು. ಸುಬ್ರಹ್ಮಣ್ಯ ಐತಾಳ್ ಪಾದೂರು ವಂದಿಸಿದರು.