Home ಧಾರ್ಮಿಕ ಕಾರ್ಯಕ್ರಮ ಚಂಡಿಕಾಯಾಗ, ಅನ್ನಸಂತರ್ಪಣೆ ಸಂಪನ್ನ

ಚಂಡಿಕಾಯಾಗ, ಅನ್ನಸಂತರ್ಪಣೆ ಸಂಪನ್ನ

ಕಾಪು ಹಳೇ ಮಾರಿಯಮ್ಮ ದೇವಸ್ಥಾನ 

15542
0
SHARE

ಕಾಪು: ಕಾಪು ಪೇಟೆ ಗೌಡ ಸಾರಸ್ವತ ಸಮಾಜದ ಆಡಳಿತಕ್ಕೆ ಒಳಪಟ್ಟಿರುವ ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಅ.15ರಂದು ಸಹಸ್ರಾರು ಭಕ್ತರು ಪಾಲ್ಗೊಳ್ಳುವಿಕೆಯೊಂದಿಗೆ ಚಂಡಿಕಾಯಾಗ ಪೂರ್ಣಾಹುತಿ ಮತ್ತು ಮಹಾಸಮಾರಾಧನೆಯು ಸಂಪನ್ನಗೊಂಡಿತು.

ಹಳೇ ಮಾರಿಗುಡಿಯ ಅರ್ಚಕ ವೇ| ಮೂ| ಕಮಲಾಕ್ಷ ಭಟ್‌ ಅವರ ನೇತೃತ್ವದಲ್ಲಿ ಚಂಡಿಕಾಯಾಗ ಪೂರ್ಣಾಹುತಿಯ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌, ಮಾಜಿ ಸಚಿವ ವಿನಯಕುಮಾರ್‌ ಸೊರಕೆ, ಕಾಪು ಹಳೇ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಅಧ್ಯಕ್ಷ ಕೆ.ಪ್ರಸಾದ್‌ ಗೋಕುಲ್‌ದಾಸ್‌ ಶೆಣೈ, ನಿಕಟಪೂರ್ವ ಆಡಳಿತ ಮೊಕ್ತೇಸರ ಶ್ರೀಧರ ಆನಂದರಾಯ ಶೆಣೈ , ಮೊಕ್ತೇಸರರಾದ ಸದಾಶಿವ ರಾಧಾಕೃಷ್ಣ ಕಾಮತ್‌, ರಾಜೇಶ್‌ ಮಾಧವರಾಯ ಶೆಣೈ ,ರಾಮ ಶಶಿಧರ ನಾಯಕ್‌, ಶ್ರೀಕಾಂತ
ಲಕ್ಷ್ಮೀ ನಾರಾಯಣ ಭಟ್‌, ಮಾಜಿ ಮೊಕ್ತೇಸರ ರಮೇಶ್‌ ಪೈ, ಆಡಳಿತ ಮಂಡಳಿಯ ಸದಸ್ಯರಾದ ಸುನೀಲ್‌ ಪೈ, ಸುರೇಶ್‌ ಪ್ರಭು, ಮೋಹನದಾಸ್‌ ಕಿಣಿ, ಸಂಜಯ್‌ ಭಟ್‌, ರಾಜೇಶ್‌ ಶೆಣೈ, ವಿವಿಧ ಗಣ್ಯರು, ಕಾಪು ಪೇಟೆಯ ಹತ್ತು ಸಮಸ್ತರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here