Home ಧಾರ್ಮಿಕ ಸುದ್ದಿ ಕವಳೆ ಶ್ರೀಗಳ ರಜತ ವರ್ಷದ ಚಾತುರ್ಮಾಸ ವ್ರತಾಚರಣೆ

ಕವಳೆ ಶ್ರೀಗಳ ರಜತ ವರ್ಷದ ಚಾತುರ್ಮಾಸ ವ್ರತಾಚರಣೆ

541
0
SHARE

ಕಾಪು: ಕ್ರಿಸ್ತ ಪೂರ್ವ ಇತಿಹಾಸ ಹೊಂದಿರುವ ಸಾರಸ್ವತ ಮಠ ಪರಂಪರೆಯ ಆದ್ಯ ಗುರುಪೀಠ ಶ್ರೀ ಸಂಸ್ಥಾನ ಶ್ರೀಮದ್‌ ಗೌಡಪಾದಾಚಾರ್ಯ ಮಠ ಪರಂಪರೆಯ 77ನೇ ಪೀಠಾಧಿಪತಿ ಶ್ರೀಮದ್‌ ಗೌಡಪಾದಾಚಾರ್ಯ ಶಿವಾನಂದ ಸರಸ್ವತೀ ಸ್ವಾಮೀ ಮಹಾರಾಜ್‌ ಅವರ ಚಾತುರ್ಮಾಸ್ಯ ವ್ರತದ ರಜತ ಮಹೋತ್ಸವದ ನೆನಪಿಗಾಗಿ ಮಠದ ಕುಲಾವಿಗಳು, ಶಿಷ್ಯ ವರ್ಗ ಹಾಗೂ ಭಕ್ತಾಭಿಮಾನಿಗಳ ಮೂಲಕವಾಗಿ ಸುಮಾರು 2.50 ಕಿ. ಗ್ರಾಂ. ಚಿನ್ನ ಬಳಸಿ ತಯಾರಿಸಿದ ಸ್ವರ್ಣ ಪೀಠ ಸಮರ್ಪಣೆಯ ಧಾರ್ಮಿಕ ಅನುಷ್ಟಾನಗಳು ಶುಕ್ರವಾರ ನಡೆದವು.

ಶ್ರೀಮದ್‌ ಗೌಡಪಾದಾಚಾರ್ಯ ಮಠ ಸಂಸ್ಥಾನದ ಕೇಂದ್ರಿಯ ಮಠ ಗೋವಾದ ಪೊಂಡ ಕವಳೆಯಲ್ಲಿ ನಡೆದ ಸಮಾರಂಭದಲ್ಲಿ ಮಠದ ಪಟ್ಟದೇವರಾದ ಭವಾನಿ ಶಂಕರ ಹಾಗೂ ಪಂಚಾಯತನ ಪರಿವಾರ ಸಾನ್ನಿಧ್ಯಗಳಿಗೆ ಸ್ವರ್ಣ ಪೀಠ ಸಮರ್ಪಣೆಯ ಧಾರ್ಮಿಕ ಅನುಷ್ಟಾನಗಳು ಮಠದ ವೈದಿಕ ಶಾಲಾ ಪ್ರಧಾನ ಗುರು ವೇ| ಮೂ| ಕಾಳಿದಾಸ ಸಾವೈಕಾರ್‌, ವೈದಿಕ ವೇ| ಮೂ| ಸುಬ್ರಹ್ಮಣ್ಯ ಭಟ್, ಮಠದ ಅರ್ಚಕರಾದ ವಿಲಾಸ್‌ ಭಟ್, ಮಹೇಶ್‌ ಭಟ್ ಮತ್ತು ಇತರ ವೈದಿಕರ ಸಹಭಾಗಿತ್ವದಲ್ಲಿ ನಡೆಯಿತು.

ಉಡುಪಿ ಸ್ವರ್ಣ ಜ್ಯುವೆಲ್ಲರ್ನ ಗುಜ್ಜಾಡಿ ರಾಮದಾಸ ನಾಯಕ್‌ ಅವರ ಮುಂದಾಳುತ್ವದಲ್ಲಿ ಸ್ವರ್ಣ ಪೀಠದ ಕುಸುರಿ ಕೆಲಸ, ವಿನ್ಯಾಸ ಹಾಗೂ ಇತರ ಅಲಂಕಾರ ಪರಿಕರಗಳ ಕೆಲಸ ಮಾಡಲಾಗಿದ್ದು ಪೀಠ ಸಮರ್ಪಣೆಯ ಸಂದರ್ಭ ಅವರು ಉಪಸ್ಥಿತರಿದ್ದರು.

ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್‌, ಕರ್ನಾಟಕ ಸರಕಾರದ ಮಾಜಿ ಸಚಿವ ಆರ್‌. ವಿ. ದೇಶಪಾಂಡೆ, ರಜತ ಮಹೋತ್ಸವ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಉಡುಪಿ ಸಂತೋಷ ವಾಗ್ಲೆ, ಪ್ರಧಾನ ಕಾರ್ಯದರ್ಶಿ ನರೇಶ್‌ ಆರ್‌. ಕಿಣಿ ಮಂಗಳೂರು, ಜೊತೆ ಕಾರ್ಯದರ್ಶಿ ಅಶೋಕ್‌ ನಾಯಕ್‌ ಹಿರ್ಗಾನ, ಕೋಶಾಧಿಕಾರಿ ಪ್ರಮೋದ್‌ ಗಾೖ ತೊಂಡೆ ಮುಂಬಯಿ, ಸಲಹಾ ಸಮಿತಿಯ ಎಂ. ಗೋಕುಲ್ದಾಸ್‌ ನಾಯಕ್‌ ಮಂಗಳೂರು, ತೋನ್ಸೆ ದೇವದಾಸ ಪೈ ಉಡುಪಿ, ಸತೀಶ್‌ ನಂಶಿಕರ್‌ ಗೋವಾ, ಟಿ. ಅಜಿತ್‌ ಪೈ ಉಡುಪಿ, ಅಮೋಲ್ರೇಗೆ ಕುಡಾಲ್, ದೇವಳಗಳ ಪ್ರತಿನಿಧಿಗಳಾದ ಸಂದೀಪ್‌ ನಾಡಕರ್ಣಿ ಮಂಗೇಶಿ, ಶ್ಯಾಮಸುಂದರ ಕಾಮತ್‌ ನಾಗೇಶಿ, ರಘುರಾಮ ಪ್ರಭು ಎಣ್ಣೆಹೊಳೆ, ಗುರ್ನೆಬೆಟ್ಟು ಗಣಪತಿ ನಾಯಕ್‌ ಬಂಟಕಲ್ಲು, ರಮೇಶ್‌ ಸಾಲ್ವಣ್‌ಕಾರ್‌ ನರಸಿಗೆ ಮಣಿಪಾಲ, ಕುಂಡೇರಿ ಜಯಂತ ನಾಯಕ ಮೊಗೇರು ಕಾಸರಗೋಡು, ಸಾರ್ವಜನಿಕ ಸಂಪರ್ಕ ಸಂಘಟಕರಾದ ಪಿ. ರಾಮಚಂದ್ರ ಕಾಮತ್‌ ಉಡುಪಿ, ಬಿ. ಪುಂಡಲೀಕ ಮರಾಠೆ ಶಿರ್ವ, ಉಪಾಧ್ಯಕ್ಷರಾದ ಎಂ. ಗೋಪಾಲಕೃಷ್ಣರಾವ್‌ ಮಂಗಳೂರು, ಕೆ. ಸುಬ್ರಹ್ಮಣ್ಯ ಭಟ್ ಉಳ್ಳಾಲ, ರಾಜೀವ ನಾಯಕ್‌ ಕ್ಯಾಲಿಕಟ್, ಟಿ.ವಿ. ಶೆಣೈ ಮುಂಬೈ, ಸುನಿಲ್ ಗಾೖತೊಂಡೆ ಸಾಗರ, ಅನಂತರಾಮ ಭಟ್ ಪರ್ಕಳ, ರಾಘವೇಂದ್ರ ಪ್ರಭು ಮಂಗಳೂರು, ಸುದೇಶ್‌ ನಾಯಕ್‌ ಕುಕ್ಕೆಹಳ್ಳಿ, ಪ್ರೇಮಾನಂದ ಪೈ ಮಂಗಳೂರು, ರಾಘವೇಂದ್ರ ಎಂ. ಪ್ರಭು ಮಂಗಳೂರು, ದೇಶದ ವಿವಿಧ ಮಠದ ಕುಲಾವಿಗಳು, ಶಿಷ್ಯ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here