ಕಾಪು : ಸಮಸ್ತ ಸಾರಸ್ವತ ಮಠ ಪರಂಪರೆಯ ಆದ್ಯಗುರುಪೀಠ ಶ್ರೀ ಸಂಸ್ಥಾನ ಶ್ರೀಮದ್ ಗೌಡಾಪಾದಾಚಾರ್ಯ ಮಠದ 77ನೇ ಯತಿವರ್ಯ ಶ್ರೀಮದ್ ಗೌಡಪಾದಾಚಾರ್ಯ ಶಿವಾನಂದ ಸರಸ್ವತೀ ಸ್ವಾಮೀ ಮಹಾರಾಜ್ರವರ ರಜತ ಸಂಭ್ರಮದ ಚಾತುರ್ಮಾಸ್ಯ ವ್ರತಾಚರಣೆ ಗೋವಾ ಪೋಂಡಾದ ಕವಳೆ ಕೇಂದ್ರೀಯ ಮಠದಲ್ಲಿ ಸಂಪನ್ನಗೊಳ್ಳುತ್ತಿದ್ದು, ಇದರ ಸವಿನೆನಪಿಗಾಗಿ ಮಠದ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿದ ಸ್ವಾಗತ ಗೋಪುರ- ಮಹಾದ್ವಾರವನ್ನು ಶ್ರೀಗಳವರು ಮಂಗಳವಾರ ಉದ್ಘಾಟಿಸಿದರು.
ಮಠದ ವೈದಿಕರಾದ ಮಹೇಶ್ ಭಟ್ ಧಾರ್ಮಿಕ ಅನುಷ್ಠಾನ ನೆರವೇರಿಸಿದರು. ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಡಾ| ಪ್ರಫುಲ್ಲ್ ಹೆಗ್ಡೆ ಮುಂಬಯಿ, ಅಧ್ಯಕ್ಷ ಸಂತೋಷ್ ವಾಗ್ಲೆ ಉಡುಪಿ, ಪ್ರಧಾನ ಕಾರ್ಯದರ್ಶಿ ನರೇಶ್ ಆರ್ . ಕಿಣಿ ಎಚ್., ಕಾರ್ಯದರ್ಶಿ ಭೂಷಣ್ ಜಿ. ಜಾಕ್ ಮುಂಬಯಿ, ಜೊತೆ ಕಾರ್ಯದರ್ಶಿ ಅಶೋಕ್ ನಾಯಕ್ ಹಿರ್ಗಾನ, ನಿಲೇಶ್ ಬೋರ್ಕಾರ್ ಕಾರವಾರ, ಮಠದ ಪ್ರಬಂಧಕ ಗಣೇಶ್ ನಾಯಕ್, ಉಪಾಧ್ಯಕ್ಷರಾದ ಜಯಂತ್ ಎಂ. ಗಾಯ್ತೊಂಡೆ ಮುಂಬಯಿ, ಅಭಯ್ ಕಾಕೋಡ್ಕರ್ ಗೋವಾ, ಕೆ. ಸುಬ್ರಹ್ಮಣ್ಯ ಭಟ್ ಉಳ್ಳಾಲ್, ಸುನಿಲ್ ಗಾಯ್ತೊಂಡೆ ಸಾಗರ, ಗೋಪಾಲಕೃಷ್ಣ ರಾವ್ ಮಂಗಳೂರು, ತಿ.ವಿ ಶೆಣೈ ಮುಂಬಯಿ, ವಿಶ್ವನಾಥ್ ಹನ್ಸ್ವಡ್ಕರ್ ಹುಬ್ಬಳ್ಳಿ, ಪ್ರಶಾಂತ್ ಶೆಣೈ ಬೆಂಗಳೂರು, ದಿನೇಶ್ ನಾಯಕ್ ಹುಬ್ಬಳ್ಳಿ, ವಸಂತ ಶ್ಯಾನುಭಾಗ್ ಚೆನೈ, ರಾಜೀವ್ ನಾಯಕ್ ಕ್ಯಾಲಿಕಟ್, ಮಂಜುನಾಥ್ ಪಿ. ನಾಯಕ್ ಉಡುಪಿ, ಕೆ. ಸದಾನಂದ ನಾಯಕ್ ಮುಂಬಯಿ, ಚಿಂತಾಮಣಿ ನಾಡಕರ್ಣಿ ಮುಂಬಯಿ, ಸಲಹಾ ಸಮಿತಿಯ ಜಗನ್ನಾಥ್ ಶೆಣೈ ಮೈಸೂರು, ಎಂ. ಗೋಕುಲ್ದಾಸ್ ನಾಯಕ್ ಮಂಗಳೂರು, ಮಾರುತಿ ಪ್ರಭು ನಾಸಿಕ್, ಕೆ. ಶ್ರೀನಿವಾಸ ಪ್ರಭು ನ್ಯೂಡೆಲ್ಲಿ, ಬಿ. ಶಂಕರ ನಾಯಕ್ ಬೆಂಗಳೂರು, ಕೆ. ರಾಮಕೃಷ್ಣ ನಾಯಕ್ ಉಡುಪಿ, ತೋನ್ಸೆ ದೇವದಾಸ್ ಪೈ ಉಡುಪಿ, ಅವದೂತ್ ದಾಬೋಳ್ಕರ್ ಮುಂಬಯಿ, ವಿವಿಧ ದೇವಳಗಳ ಆಡಳಿತ ಮೊಕ್ತೇಸರರು, ಮಂಡಳಿ ಸದಸ್ಯರು, ಮಠದ ಕುಲಾವಿಗಳು, ಶಿಷ್ಯ ವರ್ಗದವರು ಪಾಲ್ಗೊಂಡಿದ್ದರು.