Home ಧಾರ್ಮಿಕ ಸುದ್ದಿ ನಿತ್ಯಾನುಷ್ಠಾನಗಳಲ್ಲಿ ಜನರು ಪಾಲ್ಗೊಳ್ಳುವುದರಿಂದ ಸಮಾಜಕ್ಕೆ ಒಳಿತು’

ನಿತ್ಯಾನುಷ್ಠಾನಗಳಲ್ಲಿ ಜನರು ಪಾಲ್ಗೊಳ್ಳುವುದರಿಂದ ಸಮಾಜಕ್ಕೆ ಒಳಿತು’

ಪಡುಕುತ್ಯಾರು: ಆನೆಗುಂದಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ಚಾತುರ್ಮಾಸ್ಯ

1399
0
SHARE
ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಆನೆಗುಂದಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.

ಕಾಪು: ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಪೀಠಾಧಿಪತಿ ಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 15ನೇ ವರ್ಷದ ಚಾತುರ್ಮಾಸ್ಯ ವ್ರತಾ ಚರಣೆಯು ಮಂಗಳವಾರದಂದು ಪಡುಕುತ್ಯಾರು ಆನೆಗುಂದಿ ಆನೆಗುಂದಿ ಮಹಾ ಸಂಸ್ಥಾನ ದಲ್ಲಿ ಪ್ರಾರಂಭಗೊಂಡಿತು.

ಚಾತುರ್ಮಾಸ್ಯ ಪ್ರಾರಂಭೋತ್ಸವ ಹಾಗೂ ಪಾದಪೂಜೆಯ ಬಳಿಕ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಆಶೀರ್ವಚನ ನೀಡುತ್ತಾ, ಮಠ, ಸಮಾಜ ಮತ್ತು ಭಕ್ತರ ಸಂಬಂಧ ವೃದ್ಧಿಗೆ ಚಾತುರ್ಮಾಸ್ಯ ವೃತಾಚರಣೆಯು ಪೂರಕವಾಗುತ್ತದೆ. ಚಾತುರ್ಮಾಸ್ಯದ ಅವಧಿಯಲ್ಲಿ ಸಮಾಜದ ಒಳಿತು ಮತ್ತು ಲೋಕಕಲ್ಯಾಣಾರ್ಥವಾಗಿ ನಿರಂತರವಾಗಿ ಜಪ, ತಪ, ಧ್ಯಾನ, ಪೂಜೆ ಸಹಿತವಾದ ನಿತ್ಯಾನುಷ್ಠಾನಗಳನ್ನು ಮಾಡಲಾಗುತ್ತದೆ. ಈ ಅನು ಷ್ಠಾನಗಳಲ್ಲಿ ಸಮಾಜದ ಜನರು ಕೂಡಾ ಪಾಲ್ಗೊಳ್ಳು ವುದರಿಂದ ಸಮಾಜಕ್ಕೆ ಒಳಿತಾಗುತ್ತದೆ ಎಂದರು.

ಧಾರ್ಮಿಕ ಮುಂದಾಳುಗಳಾದ ವೀರರಾಘವ ಶರ್ಮಾ ಬಳ್ಳಾರಿ, ಲಕ್ಷ್ಮೀಕಾಂತ್‌ ಶರ್ಮಾ ಬಾರ್ಕೂರು, ಶ್ರೀಧರ ಪುರೋಹಿತ್‌ ಕಟಪಾಡಿ, ಅಕ್ಷಯ ಶರ್ಮಾ ಕಟಪಾಡಿ, ಅವರು ಚಾತುರ್ಮಾಸ್ಯ ವೃತಾಚರಣೆಯ ಪೌರೋಹಿತ್ಯ ವಹಿಸಿದ್ದರು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಅಧ್ಯಕ್ಷ ಬಿ. ಸೂರ್ಯಕುಮಾರ್‌ ಆಚಾರ್ಯ ಹಳೆಯಂಗಡಿ ಸಮಗ್ರ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಚಂದ್ರಶೇಖರ ಕಂಬಾರ, ಆನೆಗುಂದಿ ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸ ಘನಪಾಠಿ ವಿದ್ವಾನ್‌ ಬಾಲಚಂದ್ರ ಭಟ್ ಚಂದುಕೂಡ್ಲು, ಜೋತಿಷ ವಿದ್ವಾನ್‌ ಉಮೇಶ್‌ ಆಚಾರ್ಯ ಪಡೀಲು, ಚಾತುರ್ಮಾಸ್ಯ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ. ವಿ. ಗಂಗಾಧರ ಆಚಾರ್ಯ ಉಡುಪಿ, ಆನೆಗುಂದಿ ವಿಕಾಸ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಎನ್‌. ಆಚಾರ್ಯ ಬೆಂಗಳೂರು, ವಿ. ಶ್ರೀಧರ ಆಚಾರ್ಯ ಮುಂಬೈ, ಸದಾಶಿವ ಆಚಾರ್ಯ ಕೈಂತಿಲ ವಿಟ್ಲ, ಕರಾವಳಿ ಶ್ರೀ ಕಾಳಿಕಾಂಬಾ ದೇಗುಲಗಳ ಧರ್ಮದರ್ಶಿಗಳಾದ ಕೇಶವ ಆಚಾರ್ಯ ಮಂಗಳೂರು, ವಿ. ಶ್ರೀಧರ ಆಚಾರ್ಯ ವಡೇರಹೋಬಳಿ, ಪುರೋಹಿತ್‌ ಜಯಕರ ಆಚಾರ್ಯ ಮೂಡಬಿದ್ರೆ, ರತ್ನಾಕರ ಆಚಾರ್ಯ ಕಾರ್ಕಳ, ಮಂಜುನಾಥ ಆಚಾರ್ಯ ಉಪ್ರಳ್ಳಿ, ಮಧುಕರ ಚಂದ್ರಶೇಖರ ಆಚಾರ್ಯ ಗೋಕರ್ಣ, ಶೇಖರ ಆಚಾರ್ಯ ಕಾಪು, ಕೆ. ಸುಂದರ ಆಚಾರ್ಯ ಕೋಟೆಕಾರು, ಉಮೇಶ್‌ ಆಚಾರ್ಯ ಪೋಳ್ಯ, ಹರಿಶ್ಚಂದ್ರ ಆಚಾರ್ಯ ಕುಂಬಳೆ, ಪರಮೇಶ್ವರ ಆಚಾರ್ಯ ಮಧೂರು, ಶ್ರೀಧರ ಆಚಾರ್ಯ ಪನ್ವೇಲ್, ವಿವಿಧ ಸಮಿತಿಗಳ ಅಧ್ಯಕ್ಷರಾದ ಮಧು ಆಚಾರ್ಯ ಮೂಲ್ಕಿ, ಯು. ಕೆ. ಎಸ್‌ ಸೀತಾರಾಮ ಆಚಾರ್ಯ, ಸತೀಶ ಆಚಾರ್ಯ ಕಾರ್ಕಳ, ಜಯಕರ ಆಚಾರ್ಯ ಕರಂಬಳ್ಳಿ, ವೈ.ಧರ್ಮೇಂದ್ರ ಆಚಾರ್ಯ ಕಾಸರಗೋಡು, ಬಾಲಕೃಷ್ಣ ಹೊಸಂಗಡಿ ಭಾಗವಹಿಸಿದ್ದರು.

ಈ ಸಂದರ್ಭ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಗೌರವ ಪ್ರ. ಕಾರ್ಯದರ್ಶಿ ಲೋಕೇಶ್‌ ಎಂ. ಬಿ. ಆಚಾರ್‌, ಕಾರ್ಯದರ್ಶಿ ಕಾಡಬೆಟ್ಟು ನಾಗರಾಜ ಆಚಾರ್ಯ, ಕೋಶಾಧಿಕಾರಿ ಬಂಬ್ರಾಣ ಯಜ್ಞೇಶ್‌ ಆಚಾರ್ಯ, ಶ್ರೀಮತ್‌ ಆನೆಗುಂದಿ ಜಗದ್ಗುರು ಮಹಾ ಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಟಾನದ ಪದಾಧಿಕಾರಿಗಳು, ಸದಸ್ಯರು, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಮತ್ತು ಸಮಾಜದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here