Home ಧಾರ್ಮಿಕ ಸುದ್ದಿ 12 ವಾರಗಳ ಬಳಿಕ ಭಕ್ತರಿಗಾಗಿ ತೆರೆಯಿತು ಕಾಪು ಹಳೇ ಮಾರಿಗುಡಿ

12 ವಾರಗಳ ಬಳಿಕ ಭಕ್ತರಿಗಾಗಿ ತೆರೆಯಿತು ಕಾಪು ಹಳೇ ಮಾರಿಗುಡಿ

983
0
SHARE

ಕಾಪು: ಕಳೆದ 12 ವಾರಗಳ ಬಳಿಕ ಕಾಪು ಹಳೇ ಮಾರಿಗುಡಿ ದೇವಸ್ಥಾನವು ಜೂನ್ 16ರ ಮಂಗಳವಾರದಿಂದ ಸಾರ್ವಜನಿಕ ಭಕ್ತಾಧಿಗಳ ಭೇಟಿಗಾಗಿ ಮುಕ್ತವಾಗಿ ತೆರೆಯಲ್ಪಟ್ಟಿದೆ.

ಕೋವಿಡ್ 19 ಹರಡುವಿಕೆಯ ಮುಂಜಾಗ್ರತಾ ಕ್ರಮವಾಗಿ ಎರಡೂವರೆ ತಿಂಗಳಿನಿಂದ ಜಾರಿಯಲ್ಲಿದ್ದ ಲಾಕ್ ಡೌನ್ ನ ಕಾರಣದಿಂದಾಗಿ ಕಾಪುವಿನ ಮಾರಿಗುಡಿಗಳಿಗೆ ಭಕ್ತರ ಭೇಟಿಗೆ ನಿರ್ಬಂಧ ವಿಧಿಸಲಾಗಿತ್ತು.

ಸರಕಾರ ನಿರ್ಬಂಧ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಹೊಸ ಮತ್ತು ಮೂರನೇ ಮಾರಿಗುಡಿಯಲ್ಲಿ ಜೂ. 9 ರಿಂದಲೇ ಭಕ್ತರ ಬೇಟಿಗೆ ಅವಕಾಶ ಮಾಡಿ ಕೊಡಲಾಗಿತ್ತಾದರೂ, ಹಳೇ ಮಾರಿಗುಡಿಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಭಕ್ತರ ಭೇಟಿಗೆ ಅವಕಾಶ ಮಾಡಿಕೊಡಲು ಆಡಳಿತ ಮಂಡಳಿಯು ನಿರ್ಧರಿಸಿತ್ತು.

ಜೂ.‌ 16ರಂದು ಮಂಗಳವಾರದಿಂದ ಹಳೆ ಮಾರಿಗುಡಿಗೆ ಭಕ್ತರ ಭೇಟಿಗೆ ಅವಕಾಶ ಮಾಡಿಕೊಡಲಾಗಿದ್ದು, ಈ ವೇಳೆ ಸಾಮಾಜಿಕ ಅಂತರ, ಸರತಿ ಸಾಲಿನ ವ್ಯವಸ್ಥೆ, ಮಾಸ್ಕ್ ಕಡ್ಡಾಯ , ಒಳ ಪ್ರವೇಶಿಸುವಾಗ ದೇಹದ ಉಷ್ಣಾಂಶ ಪರೀಕ್ಷಿಸಿ, ಹ್ಯಾಂಡ್ ಸ್ಯಾನಿಟೈಸರ್ ಬಳಸಿಯೇ  ಒಳ ಪ್ರವೇಶಿಸಲು ಒತ್ತು ನೀಡಲಾಗಿದೆ.

LEAVE A REPLY

Please enter your comment!
Please enter your name here