Home ಧಾರ್ಮಿಕ ಸುದ್ದಿ ಜಲಂಚಾರು ದೇಗುಲ : ದೃಢಕಲಶ, ಧಾರ್ಮಿಕ ಸಭೆ

ಜಲಂಚಾರು ದೇಗುಲ : ದೃಢಕಲಶ, ಧಾರ್ಮಿಕ ಸಭೆ

1189
0
SHARE

ಕಾಪು: ಜಲಂಚಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಸಪರಿವಾರ ಶ್ರೀ ನಾಗ ಬ್ರಹ್ಮಸ್ಥಾನದಲ್ಲಿ ಕ್ಷೇತ್ರದ ತಂತ್ರಿ ವೇ| ಮೂ| ಕಳತ್ತೂರು ಉದಯ ತಂತ್ರಿ ನೇತೃತ್ವದಲ್ಲಿ ಭಕ್ತರು, ಜೀರ್ಣೋದ್ಧಾರ ಸಮಿತಿ, ದಾನಿಗಳ ಸಹಕಾರದೊಂದಿಗೆ ಪಂಜಿತ್ತೂರುಗುತ್ತು ಫ್ಯಾಮಿಲಿ ಟ್ರಸ್ಟ್‌ ಉಸ್ತುವಾರಿಕೆಯಲ್ಲಿ ದೃಢ ಕಲಶೋತ್ಸವ, ಧಾರ್ಮಿಕ ಸಭೆ ಆ. 26ರಂದು ಸಂಪನ್ನಗೊಂಡಿತು.

ವಿದ್ವಾಂಸ ಡಾ| ರಾಮನಾಥ ಆಚಾರ್ಯ ಧಾರ್ಮಿಕ ಸಭೆಯಲ್ಲಿ ಪ್ರವಚನ ನೀಡಿ, ಭಾರತೀಯರು ಪ್ರಥಮದಲ್ಲಿ ದೇವರ ಮೇಲೆ, ಅನಂತರದಲ್ಲಿ ದೇಶದ ಮೇಲೆ, ಕೊನೆಯಲ್ಲಿ ದೇಹದ ಮೇಲೆ ಪ್ರೀತಿ ತೋರಿಸುವ ಪರಂಪರೆಯಿಂದ ಬಂದವರಾಗಿದ್ದೇವೆ. ಅದೇ ಸದಾಚಾರವನ್ನು ಮುಂದುವರಿಸಿಕೊಂಡು ಬಂದಾಗ ಮಾತ್ರ ಇಂತಹ ಅದ್ಭುತ ಜೀರ್ಣೋದ್ಧಾರ ಮೂಡಿ ಬರಲು ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ಕಾಪು ಕ್ಷೇತ್ರದಲ್ಲಿ ವಿವಿಧ ದೇವಸ್ಥಾನಗಳು ಜೀರ್ಣೋದ್ಧಾರಗೊಳ್ಳುತ್ತಿದ್ದು ಮುಂದಿನ ಹಂತದ ಜೀರ್ಣೋದ್ಧಾರಕ್ಕೆ ಸರಕಾರದ ಅನುದಾನ ಶೀಘ್ರ ಲಭಿಸುವಂತಾಗಲಿ ಎಂದರು.

ಸಮಾಜ ಸೇವಕ ಸುರೇಶ್‌ ಪಿ. ಶೆಟ್ಟಿ ಗುರ್ಮೆ ಮಾತನಾಡಿ, ಬದುಕಿನ ಕನಸನ್ನು ಹೋಗಲಾಡಿಸುವ ಕ್ರಿಯೆ ಧಾರ್ಮಿಕತೆಯಲ್ಲಿ ಅಡಗಿದೆ. ಧಾರ್ಮಿಕತೆ ಬದುಕಿನ ಏರು ಮೆಟ್ಟಿಲನ್ನು ಪರಿಚಯಿಸುತ್ತದೆ ಎಂದರು.

ಜಲಂಚಾರು ಶ್ರೀ ಮಹಾಲಿಂಗೇಶ್ವರ – ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ರವಿರಾಜ್‌ ಶೆಟ್ಟಿ ಪಂಜಿತ್ತೂರುಗುತ್ತು ಅಧ್ಯಕ್ಷತೆ ವಹಿಸಿದ್ದರು. ಕಾಪು ಬಂಟರ ಸಂಘದ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ವೇಣುಗೋಪಾಲ ತಂತ್ರಿ, ಅವರಾಲು ಕಂಕಣಗುತ್ತು ಯಜಮಾನ ಕೃಷ್ಣ ಶೆಟ್ಟಿ, ಪಡುಬಿದ್ರಿ ಪೇಟೆಮನೆ ಅನಿಲ್ ಶೆಟ್ಟಿ, ಉದ್ಯಮಿಗಳಾದ ಸುಭಾಸ್‌ ಶೆಟ್ಟಿ, ಯಾದವ ಶೆಟ್ಟಿ, ಬಗ್ಗೇಡಿಗುತ್ತು ತುಕಾರಾಮ ಶೆಟ್ಟಿ, ಪಾದೂರುಗುತ್ತು ಜಯಲಕ್ಷ್ಮೀ ಎಸ್‌. ಆಳ್ವ, ಸಚ್ಚಿದಾನಂದ ಶೆಟ್ಟಿ ಬಳ್ಕುಂಜೆ ಉಪಸ್ಥಿತರಿದ್ದರು.

ದೇಗುಲದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ಸಂದರ್ಭ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಸಂಘಟನೆ ಮಾಡಿದ ಸಮಾಜ ಸೇವಕ ಲೀಲಾಧರ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಕೋಶಾಧಿಕಾರಿ ಅರುಣ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿದರು. ಸುಬ್ರಹ್ಮಣ್ಯ ಐತಾಳ್‌ ಪ್ರಸ್ತಾವನೆಗೈದರು. ತಾ.ಪಂ. ಸದಸ್ಯೆ ಶಶಿಪ್ರಭಾ ಶೆಟ್ಟಿ ಮತ್ತು ನಿವೃತ್ತ ಮುಖ್ಯ ಶಿಕ್ಷಕ ನಿರ್ಮಲ್ ಕುಮಾರ್‌ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here