Home ಧಾರ್ಮಿಕ ಸುದ್ದಿ ನಾಳೆ ಸ್ವರ್ಣಪೀಠ ಸಮರ್ಪಣೆ

ನಾಳೆ ಸ್ವರ್ಣಪೀಠ ಸಮರ್ಪಣೆ

ಕೈವಲ್ಯ ಶ್ರೀಗಳ ರಜತ ಚಾತುರ್ಮಾಸ್ಯ

562
0
SHARE

ಕಾಪು: ಕ್ರಿಸ್ತ ಪೂರ್ವದ ಇತಿಹಾಸ ಹೊಂದಿರುವ ಸಾರಸ್ವತ ಮಠ ಪರಂಪರೆಯ ಆದ್ಯ ಗುರುಪೀಠ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಮಠ ಸಂಸ್ಥಾನದ 77ನೇ ಪೀಠಾಧೀಶ ಶ್ರೀಮತ್‌ ಗೌಡಪಾದಾಚಾರ್ಯ ಶಿವಾನಂದ ಸರಸ್ವತೀ ಸ್ವಾಮೀ ಮಹಾರಾಜ್‌ ಅವರ25ನೇ ವರ್ಷದ ರಜತ ಮಹೋತ್ಸವ ಚಾತುರ್ಮಾಸ ವ್ರತದ ಸವಿನೆನಪಿಗಾಗಿ ಆ. 2ರಂದು ಸ್ವರ್ಣಪೀಠ ಸಮರ್ಪಣೆ ನಡೆಯಲಿದೆ.

ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೇಂದ್ರೀಯ ಮಠ ಗೋವಾ ಪೋಂಡಾದ ಕವಳೆಯಲ್ಲಿ ಚಾತುರ್ಮಾಸ ವ್ರತಾ ಚರಣೆ ನಡೆಯುತ್ತಿದ್ದು, ರಜತ ವರ್ಷದ ಸವಿನೆನಪಿಗಾಗಿ ಶ್ರೀ ಸಂಸ್ಥಾನದ ಕುಳಾವಿಗಳು, ಶಿಷ್ಯ ವರ್ಗ, ಭಜಕರು ಮಠದ ಪಟ್ಟದೇವರಾದ ಶ್ರೀ ಭವಾನಿ ಶಂಕರ, ಪಂಚಾಯತನ ಪರಿವಾರ ಸಾನ್ನಿಧ್ಯಕ್ಕೆ 1.5 ಕೆ.ಜಿ. ತೂಕದ ಚಿನ್ನದ ಸ್ವರ್ಣ ಪೀಠ ಸಮರ್ಪಣೆಯು ಶ್ರೀಗಳ ಉಪಸ್ಥಿತಿಯಲ್ಲಿ ನಡೆ ಯಲಿದೆ ಎಂದು ರಜತ ಮಹೋತ್ಸವ ಚಾತುರ್ಮಾಸ ಸಮಿತಿ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here