ಕಾಪು : ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ವರ್ಧಂತಿ ಉತ್ಸವ, ಮಹಾರುದ್ರಯಾಗ ಮತ್ತು ಅನ್ನಸಂತರ್ಪಣೆಯು ಮಾ. 12ರಂದು ಸಂಪನ್ನಗೊಂಡಿತು.
ಹನ್ನೊಂದನೇ ಬ್ರಹ್ಮಕಲಶೋತ್ಸವ ವರ್ಧಂತಿ ಉತ್ಸವದ ಪ್ರಯುಕ್ತ ಕ್ಷೇತ್ರದ ಪರ್ಯಾಯ ತಂತ್ರಿ ತಂತ್ರಿ ವೇ| ಮೂ| ಕರುಣಾಕರ ತಂತ್ರಿ ಕಳತ್ತೂರು ಅವರ ಅರ್ಚಕತ್ವದಲ್ಲಿ, ಸರತಿ ಅರ್ಚಕ ವೇ| ಮೂ| ಗುರುರಾಜ ಭಟ್ ಹಾಗೂ ವೈದಿಕ ವೃಂದದವರ ಸಹಕಾರದೊಂದಿಗೆ ಸ್ವಯಂಭೂ ದೇವರ ಸನ್ನಿಧಿಯಲ್ಲಿ ವಿಶೇಷ ರುದ್ರಯಾಗ, ಶ್ರೀ ವಿಶ್ವೇಶ್ವರ, ಗಣಪತಿ, ಅನ್ನಪೂರ್ಣೇಶ್ವರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಮಹಾ ಅನ್ನಸಂತರ್ಪಣೆ, ರಾತ್ರಿ ಮಹಾರಂಗಪೂಜೆ, ಉತ್ಸವ ಬಲಿ ನಡೆಯಿತು.
ದೇಗುಲದ ಪವಿತ್ರಪಾಣಿ ಕೆ.ಎಲ್. ಕುಂಡಂತಾಯ, ಆಡಳಿತಾಧಿಕಾರಿ ರವಿ ಕುಮಾರ್, ಕಾರ್ಯ ನಿರ್ವಾಹಕ ಅಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವೈ. ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶೇಖರ್ ಡಿ. ಶೆಟ್ಟಿ ಮಾಣಿಯೂರು, ನಿರಂಜನ್ ಶೆಟ್ಟಿ ಕಿನ್ನೋಡಿಗುತ್ತು, ನರಸಿಂಹ ಜೆನ್ನಿ ಪಣಿಯೂರು, ಸೋಮನಾಥ ಪೂಜಾರಿ ಸಾಂತೂರು, ಜಯಲಕ್ಷ್ಮೀ ಎಸ್. ಆಳ್ವ ಪಾದೂರುಗುತ್ತು, ವಿಜಯಲಕ್ಷ್ಮೀ ದೇವಾಡಿಗ ಬೆಳಪು, ಬಾಲಕೃಷ್ಣ ಪಣಿಯೂರು, ಪ್ರಮುಖರಾದ ಎಲ್ಲೂರುಗುತ್ತು ಪ್ರಭಾಕರ ಶೆಟ್ಟಿ, ಎಲ್ಲೂರು ಗ್ರಾ.ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್, ಪ್ರಮುಖರಾದ ಪ್ರಸಾದ್ ಶೆಟ್ಟಿ ಕುತ್ಯಾರು, ಅರುಣಾಕರ ಶೆಟ್ಟಿ ಕಳತ್ತೂರು, ಯಶವಂತ್ ಶೆಟ್ಟಿ ಎಲ್ಲೂರು, ಎಲ್ಲೂರು ಯುವಕ ಮಂಡಲದ ಅಧ್ಯಕ್ಷ ಸಂದೀಪ್ ಶೆಟ್ಟಿ, ಗ್ರಾಮ ಸೀಮೆಯ ಭಕ್ತರು ಪಾಲ್ಗೊಂಡಿದ್ದರು.