Home ಧಾರ್ಮಿಕ ಕಾರ್ಯಕ್ರಮ ಉಚ್ಚಿಲ ರಾಘವೇಂದ್ರ ಉತ್ಸವ ಮೂರ್ತಿಗೆ ಸ್ವರ್ಣ ಕವಚ ಅರ್ಪಣೆ

ಉಚ್ಚಿಲ ರಾಘವೇಂದ್ರ ಉತ್ಸವ ಮೂರ್ತಿಗೆ ಸ್ವರ್ಣ ಕವಚ ಅರ್ಪಣೆ

1590
0
SHARE

ಕಾಪು: ಉಚ್ಚಿಲ ರಾಘವೇಂದ್ರ ಮಠದ ಶ್ರೀ ರಾಘವೇಂದ್ರ ಸ್ವಾಮಿ ವೃಂದಾವನದಲ್ಲಿ ನಡೆಯುತ್ತಿರುವ ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವವು ಆ. 17ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.

ಈ ಸಂದರ್ಭ ಮಠದ ಪ್ರಧಾನ ಅರ್ಚಕ ಯು. ಶ್ರೀನಿವಾಸ ಭಟ್ ಅವರು ದೇವರ ಉತ್ಸವ ಮೂರ್ತಿಗೆ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಸ್ವರ್ಣ ಕವಚವನ್ನು ಸಮರ್ಪಿಸಿದ್ದು ಭಕ್ತಾದಿಗಳ ಸಮ್ಮುಖದಲ್ಲಿ ದೇವರಿಗೆ ಸಮರ್ಪಿಸಿ, ಬಳಿಕ ಉತ್ಸವ ನೆರವೇರಿಸಲಾಯಿತು.

ಉಚ್ಚಿಲ ರಾಘವೇಂದ್ರ ಮಠದ ಪ್ರಧಾನ ಅರ್ಚಕ ಯು. ಶ್ರೀನಿವಾಸ ಭಟ್, ಮಠದ ಆಡಳಿತ ಸಮಿತಿಯ ಗೌರವಾಧ್ಯಕ್ಷ ರಾಜ್‌ ಭಟ್, ಅಧ್ಯಕ್ಷ ಗೋವಿಂದ ಭಟ್, ರಾಘವೇಂದ್ರ ಐತಾಳ್‌ ಮಂಗಳಾದೇವಿ, ಕಲಾ ಪ್ರಶಾಂತ್‌ ರಾವ್‌ ಉಡುಪಿ, ಸ್ವಾತಿ ಸೀತಾರಾಮ ಆಚಾರ್ಯ ಮಂಗಳೂರು, ರಂಜಿತಾ ಗೋವಿದ ಭಟ್ ಉಚ್ಚಿಲ, ವಿವಿಧ ಗಣ್ಯರು, ಭಕ್ತವೃಂದದ‌ವರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here