Home ಧಾರ್ಮಿಕ ಸುದ್ದಿ ಕಾಪಿಕಾಡ್‌: ದೈವಸ್ಥಾನ ಪುನಃ ನಿರ್ಮಾಣ ಸಭೆ

ಕಾಪಿಕಾಡ್‌: ದೈವಸ್ಥಾನ ಪುನಃ ನಿರ್ಮಾಣ ಸಭೆ

880
0
SHARE

ಬಿಜೈ: ಇಲ್ಲಿಯ ಕಾಪಿಕಾಡ್‌ ಶ್ರೀ ಗುರು ವೈದ್ಯನಾಥ ಶ್ರೀದೇವಿ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಕ್ಷೇತ್ರದ ದೈವಸ್ಥಾನದ ಪುನಃ ನಿರ್ಮಾಣ ಸಭೆ ಹಾಗೂ ಸಮಿತಿ ರಚನೆ ಇತ್ತೀಚೆಗೆ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಮೇಯರ್‌ ಎಂ. ಶಶಿಧರ್‌ ಹೆಗ್ಡೆ ಮಾತನಾಡಿ, ದೈವಸ್ಥಾನದ ಪುನಃ ನಿರ್ಮಾಣ ಕಾಮಗಾರಿಯು ಮುಂದಿನ ವಾರ್ಷಿಕ ನೇಮಕ್ಕೂ ಮುನ್ನ ಪೂರ್ಣಗೊಳ್ಳಬೇಕಿದೆ. ಭಕ್ತರು ದೈವಸ್ಥಾನ ಪುನಃ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಆಶಿಸಿದರು.

ಗಣೇಶ್‌ ರಾಜ್‌ ಕಾಪಿಕಾಡ್‌, ಉದಯಕುಮಾರ್‌ ಚಿಲಿಂಬಿ, ಸ್ವರ್ಣ ಆರ್‌. ಕೃಷ್ಣ, ಸುನಂದಾ ಕೊಟ್ಟಾರ ಕ್ರಾಸ್‌ ಮಾತನಾಡಿದರು. ದೈವಸ್ಥಾನದ ಪುನಃ ನಿರ್ಮಾಣ ಸಮಿತಿಗೆ ಶೆಡೆ ಮಂಜುನಾಥ್‌ ಭಂಡಾರಿ, ಪ್ರಮುಖ್‌ ರೈ ಮಂಗಳೂರು (ಗೌರವಾಧ್ಯಕ್ಷರು), ರವಿ ಪೂಜಾರಿ ಚಿಲಿಂಬಿ, ರತನ್‌ ಶೆಟ್ಟಿ ಕಾಪಿಕಾಡ್‌, ರಘು ಸಾಲ್ಯಾನ್‌ ತಿರುವೈಲು, ಎಸ್‌.ಆರ್‌. ವಿಜಯಕುಮಾರ್‌, ಸುನಂದಾ ಕೊಟ್ಟಾರಕ್ರಾಸ್‌ (ಉಪಾ ಧ್ಯಕ್ಷರು), ದೇವೇಂದ್ರ ಕಾಪಿಕಾಡ್‌ (ಪ್ರ.ಕಾರ್ಯದರ್ಶಿ), ಚಂದ್ರಶೇಖರ ಅಶೋಕನಗರ (ಕಾರ್ಯದರ್ಶಿ), ಪದ್ಮನಾಭ ಬಾರೆಬೈಲ್‌, ಚಂದ್ರಹಾಸ್‌ ಶೆಟ್ಟಿ ದಡ್ಡಲ್‌ಕಾಡ್‌ (ಜತೆ ಕಾರ್ಯದರ್ಶಿಗಳು), ದಿವಾಕರ್‌ ಕೆ. (ಖಜಾಂಚಿ), ಸಂಪತ್‌ ಕುಮಾರ್‌ ಕಾಪಿಕಾಡ್‌ (ಸಹ ಖಜಾಂಚಿ) ಅವರನ್ನು ಆಯ್ಕೆ ಮಾಡಲಾಯಿತು.

ಅರ್ಚಕ ನಾರಾಯಣ ಕಾಪಿಕಾಡ್‌, ಹರಿಶ್ಚಂದ್ರ ಹೊಗೆ ಬಜಾರ್‌, ರಾಜೇಂದ್ರ ಆದರ್ಶನಗರ, ಕುಂಞಿರಾಮನ್‌ ದಡ್ಡಲ್‌ ಕಾಡ್‌, ಪದ್ಮನಾಭ ಬಾರೆಬೈಲ್‌, ಮಾಜಿ ಮೇಯರ್‌ ಪ್ರವೀಣ್‌, ಜನಾರ್ದನ್‌ ಸಾಲ್ಯಾನ್‌, ಪ್ರಕಾಶ್‌ ಕೋಡಿಕಲ್‌, ಉಮೇಶ್‌ಕುಮಾರ್‌, ನವೀನ್‌ ಹೆಜ್ಮಾಡಿ, ಪ್ರಸಾದ್‌ ಮೂಡಿತ್ತಾಯ ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರದ ಗುರಿಕಾರ ಎಂ. ಮುರಳಿಕುಮಾರ್‌ ಸ್ವಾಗತಿಸಿದರು. ದೇವೇಂದ್ರ ಕಾಪಿಕಾಡ್‌ ವಂದಿಸಿದರು. ಖಜಾಂಚಿ ದಿವಾಕರ್‌ ಕೊಟ್ಟಾರಕ್ರಾಸ್‌ ನಿರೂಪಿಸಿದರು.

LEAVE A REPLY

Please enter your comment!
Please enter your name here