Home ಧಾರ್ಮಿಕ ಸುದ್ದಿ ಕಾಣಿಯೂರು: ರಾಮತೀರ್ಥ ಮಠದ ಜಾತ್ರೆ

ಕಾಣಿಯೂರು: ರಾಮತೀರ್ಥ ಮಠದ ಜಾತ್ರೆ

1345
0
SHARE

ಕಾಣಿಯೂರು : ಇಲ್ಲಿನ ಉಡುಪಿ ಶ್ರೀ ಕಾಣಿಯೂರು ರಾಮತೀರ್ಥ ಮಠದ ಜಾತ್ರೆ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಫೆ.
22ರಿಂದ 26ರ ವರೆಗೆ ನಡೆಯಿತು.

ಫೆ. 22ರ ರಾತ್ರಿ ಭಂಡಾರ ತೆಗೆದು ಧ್ವಜಾರೋಹಣ, 23ರಂದು ಬೆಳಗ್ಗೆ ಅಮ್ಮನವರ ಸನ್ನಿಧಿಯಲ್ಲಿ ನವಕ ಕಲಶಾಭಿಷೇಕ ಮಹಾಪೂಜೆ, ಉಳ್ಳಾಕುಲು ಮಾಡದಲ್ಲಿ ಹಸುರು ಕಾಣಿಕೆ ಸಮರ್ಪಣೆ, ಉಳ್ಳಾಕುಲು ಸನ್ನಿಧಿಯಲ್ಲಿ ನವಕ ಕಲಶಾಭಿಷೇಕ, ನಾಗೇಶ್‌ ಕುಲಾಲ್‌ ನಿರ್ದೇಶನದಲ್ಲಿ ದಯಾನಂದ ಕತ್ತಲಸಾರ್‌ ನಿರೂಪಣೆಯ ತುಳುನಾಡ ಸಂಸ್ಕೃತಿ ನಡೆಯಿತು. ಫೆ. 24ರಂದು ಬೆಳಗ್ಗೆ ಮಲ್ಲಾರ ನೇಮ, ದೈಯರ ನೇಮ, ರಾತ್ರಿ ಬಯ್ಯದ ಬಲಿ, ಫೆ. 25ರಂದು ಏಲ್ಯಾರ ನೇಮ, ಮಾಣಿ ದೈವದ ನೇಮ, ನಾಯರ್‌ ದೈವದ ನೇಮ, ಧ್ವಜಾರೋಹಣ, ಫೆ. 26ರಂದು ಬೆಳಗ್ಗೆ ಕಾಣಿಯೂರು ಮಠದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಅಪರಾಹ್ನ ಅಮ್ಮನವರ ಪೂಜೆ, ಶಿರಾಡಿ ದೈವದ ನೇಮ ನಡೆಯಿತು.

LEAVE A REPLY

Please enter your comment!
Please enter your name here