Home ಧಾರ್ಮಿಕ ಸುದ್ದಿ ಕನ್ಯಾನ ಟೌನ್‌ ಮಸೀದಿ ರಮ್ಜಾನ್‌ ಕಿಟ್‌ ವಿತರಣೆ, ತರಗತಿ

ಕನ್ಯಾನ ಟೌನ್‌ ಮಸೀದಿ ರಮ್ಜಾನ್‌ ಕಿಟ್‌ ವಿತರಣೆ, ತರಗತಿ

1372
0
SHARE

ಕನ್ಯಾನ : ಕನ್ಯಾನ ಚೆಡವು ದುಲ್ಫುಖಾರ್‌ ಸೇವಾ ಸಂಘ (ರಿ.) ಹಾಗೂ ದುಲ್ಫುಖಾರ್‌ ಗಲ್ಫ್ ಕಮಿಟಿ ಆಶ್ರಯದಲ್ಲಿ ಕನ್ಯಾನ ಟೌನ್‌ ಮಸೀದಿಯಲ್ಲಿ ರಮಳಾನ್‌ ತರಗತಿ ಹಾಗೂ ಕಿಟ್ ವಿತರಣೆ ನಡೆಯಿತು.ಶೈಖುನಾ ಕನ್ಯಾನ ಉಸ್ತಾದ್‌ ದುವಾ ನೆರವೇರಿಸಿ ಅಧ್ಯಕ್ಷತೆ ವಹಿಸಿದ್ದರು. ನಿಯಾಝ್ ಕಾಮಿಲ್ ಸಖಾಫಿ ಕುಕ್ಕಾಜೆ ಉದ್ಘಾಟಿಸಿದರು.

ಸಿರಾಜುದ್ದೀನ್‌ ಸಖಾಫಿ ಕನ್ಯಾನ ಮಾತನಾಡಿದರು. ಬಡ ಮತ್ತು ಅನಾಥರಾದ ಅರ್ಹ 90 ಕುಟುಂಬಗಳಿಗೆ ದುಲ್ಫ‌ುಖಾರ್‌ ಗಲ್ಫ್ ಕಮಿಟಿ ವತಿಯಿಂದ ರಮ್ಜಾನ್‌ ಕಿಟ್ ವಿತರಿಸಲಾಯಿತು.

ಅಬ್ದುಲ್ ಖಾದರ್‌ ಸಅದಿ, ಹಮೀದ್‌ ಸಖಾಫಿ ಪಾಡಿ, ಅಶ್ರಫ್‌ ಮದನಿ ಚೆಂಬರ್ಪು, ಇಸ್ಮಾಯಿಲ್ ಹಾಜಿ ಬಾಲೊ÷ೕಡಿ, ಹುಸೈನಾರ್‌ ಹಾಜಿ ಪೊಯ್ಯಕಂಡ, ಕನ್ಯಾನ ಗ್ರಾಮ ಪಂ. ಉಪಾಧ್ಯಕ್ಷ ಕೆ.ಪಿ. ಅಬ್ದುರ್ರಹ್ಮಾನ್‌, ಅದ್ದುಚ್ಚ ಚೆಡವು, ಗಲ್ಫ್ ಕಮಿಟಿ ಉಪಾಧ್ಯಕ್ಷ ಜಲಾಲ್ ಮರಾಠಿಮೂಲೆ, ದುಲ್ಫುಖಾರ್‌ ಸೇವಾ ಸಂಘದ ಅಧ್ಯಕ್ಷ ಆಸೀಫ್‌ ಬನಾರಿ ಹಾಗೂ ಕಮಿಟಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಶ್ರಫ್‌ ಸಖಾಫಿ ಕನ್ಯಾನ ಸ್ವಾಗತಿಸಿದರು.

LEAVE A REPLY

Please enter your comment!
Please enter your name here