Home ಧಾರ್ಮಿಕ ಸುದ್ದಿ ಕನ್ಯಾಡಿ ಶ್ರೀರಾಮ ಕ್ಷೇತ್ರ: ಜಾತ್ರೆಗೆ ಚಾಲನೆ

ಕನ್ಯಾಡಿ ಶ್ರೀರಾಮ ಕ್ಷೇತ್ರ: ಜಾತ್ರೆಗೆ ಚಾಲನೆ

1467
0
SHARE

ಬೆಳ್ತಂಗಡಿ :ಶ್ರೀ ಗುರುದೇವ ಮಠ ದೇವರಗುಡ್ಡೆ, ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್‌ ನಿತ್ಯಾನಂದ ನಗರ ಧರ್ಮಸ್ಥಳ ಇದರ 59ನೇ ವರ್ಷದ ಶ್ರೀರಾಮ ತಾರಕ ಮಂತ್ರ ಸಪ್ತಾಹ, ಜಾತ್ರೆಗೆ ರವಿವಾರ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ನಾತು ಪರಂಪರೆಯ ಮುಖ್ಯಸ್ಥ ಶ್ರೀ ಮುಕ್ತನಾಥ ಸ್ವಾಮೀಜಿ ಚಂಡೀಗಢ ಅವರು ಚಾಲನೆ ನೀಡಿದರು.

ಶಾಸಕ ಹರೀಶ್‌ ಪೂಂಜ, ಹಿರಿಯ ವಕೀಲ ಪ್ರತಾಪ್‌ಸಿಂಹ ನಾಯಕ್‌, ಮಹಿಳಾ ಬಿಲ್ಲವ ವೇದಿಕೆ ಸ್ಥಾಪಕಾಧ್ಯಕ್ಷೆ ಸುಜಿತಾ ವಿ. ಬಂಗೇರ, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್‌ ಪ್ರಸಾದ್‌ ಕಾಮತ್‌, ನ್ಯಾಯವಾದಿ ಭಗೀರಥ ಜಿ., ಟ್ರಸ್ಟಿಗಳಾದ ಮೋಹನ್‌ ಉಜೊjàಡಿ, ತುಕಾರಾಮ್‌, ಉದ್ಯಮಿ ಮೋಹನ್‌ ಶೆಟ್ಟಿಗಾರ್‌, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಶೈಲೇಶ್‌ ಕುಮಾರ್‌, ಉದ್ಯಮಿಗಳಾದ ಪ್ರಭಾಕರ್‌ ಧರ್ಮಸ್ಥಳ, ರವಿ ಬರಮೇಲು, ಎಂ.ಬಿ. ಜಯಶಂಕರ್‌, ಸದಾನಂದ ಪೂಜಾರಿ ಉಂಗಿಲಬೈಲು, ಅನಂತರಾಮ್‌ ರಾವ್‌ ಚಾರ್ಮಾಡಿ, ಯುವ ಬಿಲ್ಲವ ವೇದಿಕೆಯ ಮಾಜಿ ಅಧ್ಯಕ್ಷ ವಸಂತ ಪೂಜಾರಿ ಪುದುವೆಟ್ಟು, ಜಯರಾಮ್‌ ಬಂಗೇರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಎ.8ರಂದು ಶ್ರೀ ಗುರುದೇವರುಗಳ ಮೂರ್ತಿಗಳ ಬಲಿ ಉತ್ಸವ ಪೂಜೆ ನಡೆಯಲಿದೆ. ಎ.14ರ ವರೆಗೆ ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸ್ಮರಣೆಯೊಂದಿಗೆ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ರಾಮನಾಮ ಸಪ್ತಾಹ, ಶ್ರೀರಾಮ ಕ್ಷೇತ್ರದ ಪ್ರತಿಷ್ಠಾ ಜಾತ್ರೆ ಹಾಗೂ ರಥೋತ್ಸವ ಜರಗಲಿದೆ.

LEAVE A REPLY

Please enter your comment!
Please enter your name here