ಬಡಗನ್ನೂರು : ಕನ್ನರ್ಪಾಡಿ, ನಿಡ್ಪಳ್ಳಿಯ ಶ್ರೀ ಬ್ರಹ್ಮಬೈದರ್ಕಳ ಸಮಿತಿಯ ನೇಮ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಫೆ. 18ರಂದು ನಡೆದವು.
ಫೆ. 17ರಂದು ಬೆಳಗ್ಗೆ 10ರಿಂದ ಗಣಪತಿ ಹೋಮ, ಬ್ರಹ್ಮರ ತಂಬಿಲ, ನಾಗ ತಂಬಿಲ, ಸಂಜೆ 5ರಿಂದ ಭಜನೆ, ಭಂಡಾರ ತೆಗೆದು ಶ್ರೀ ಕೊಡಮಂತಾಯ ದೈವದ ನೇಮ, ಪ್ರಸಾದ
ವಿತರಣೆ ನಡೆಯಿತು.
ಫೆ. 18ರಂದು ಸಂಜೆ 5ರಿಂದ ಹೋಮ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ 10ರಿಂದ ಶ್ರೀ ಬೈದೆರುಗಳು ಗರಡಿ ಇಳಿಯುವುದು, ಕನ್ನಿದಾರು ಗರಡಿ ಇಳಿಯುವುದು, ದರ್ಶನ ಪಾತ್ರಿಗಳ ಸೇಟ್, ಬೈದೆರುಗಳ ಸೇಟ್ ನಡೆಯಿತು ಫೆ. 19ರಂದು ಬೆಳಗ್ಗೆ ಪ್ರಸಾದ ವಿತರಣೆ ನಡೆಯಿತು.
ಸಮಿತಿ ಅಧ್ಯಕ್ಷ ಶಿವಪ್ಪ ಪೂಜಾರಿ, ಉಪಾಧ್ಯಕ್ಷ ಸಂಜೀವ ಮಾಸ್ಟರ್, ಕಾರ್ಯದರ್ಶಿ ಮಾಧವ ಆರ್. ಪೂಜಾರಿ, ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಉದ್ಯಮಿ ಅಶೋಕ ರೈ ಕೋಡಿಂಬಾಡಿ, ಪುತ್ತೂರು ಪಿಎಲ…ಡಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಳ್ಯೊಟ್ಟು, ನಾಗೇಶ್ ಗೌಡ ಪುಳಿತ್ತಡಿ, ಕೃಷ್ಣಪ್ರಸಾದ ಆಳ್ವ ಚೆಲ್ಯಡ್ಕ, ದಾಸ್ತಾನು ಬರಹಗಾರ ಶೇಖರ ನಾರಾವಿ, ಆರ್.ಸಿ. ನಾರಾಯಣ ರೆಂಜ, ಸಮಿತಿ ಸದಸ್ಯರು ಹಾಗೂ ಭಕ್ತರು ಭಾಗವಹಿಸಿದ್ದರು.