Home ಧಾರ್ಮಿಕ ಸುದ್ದಿ ಗರಡಿ ಕ್ಷೇತ್ರದಲ್ಲಿ ಭಕ್ತರ ಹರಕೆಯ ಉರುಳು ಸೇವೆ

ಗರಡಿ ಕ್ಷೇತ್ರದಲ್ಲಿ ಭಕ್ತರ ಹರಕೆಯ ಉರುಳು ಸೇವೆ

1156
0
SHARE

ಕಂಕನಾಡಿ : ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಹರಕೆಯ ಉರುಳು ಸೇವೆಯನ್ನು ಭಕ್ತರು ನಡೆಸಿದರು.

ಉರುಳು ಸೇವೆ ಗರಡಿ ಕ್ಷೇತ್ರದ ಅಧ್ಯಕ್ಷ ಕೆ. ಚಿತ್ತರಂಜನ್‌, ಕ್ಷೇತ್ರದ ಸರ್ವ ಶಕ್ತಿಗಳಿಗೆ ಪ್ರಾರ್ಥನೆ ಸಲ್ಲಿಸಿ ಉರುಳು ಸೇವೆಗೆ ಅನುವು ಕೋರಿದರು. ಬಳಿಕ ಉರುಳು ಸೇವೆ ನಡೆದು, ಅನಂತರ ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಲಾಯಿತು.

ಗರಡಿ ಕ್ಷೇತ್ರದ ಮ್ಯಾನೇಜರ್‌ ಕಿಶೋರ್‌ ಕುಮಾರ್‌, ಗರಡಿ ಕ್ಷೇತ್ರದ ಮೊಕ್ತೇಸರ ಜೆ.
ದಿನೇಶ್‌ ಅಂಚನ್‌, ಕಾರ್ಪೋರೇಟರ್‌ ಸಂದೀಪ್‌ ಗರೋಡಿ, ಬಜರಂಗದಳದ ಪ್ರಮುಖ ಶರಣ್‌ ಪಂಪ್‌ವೆಲ್‌, ನಾಗೇಶ್‌ ಸಾಲ್ಯಾನ್‌ ಗರೋಡಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಗದೀಶ್‌ ಕೆ., ಕಂಕನಾಡಿ ಬಿಲ್ಲವ ಸೇವಾ ಸಮಾಜದ ಮಾಜಿ ಅಧ್ಯಕ್ಷ ಮಹಾಬಲ ಪೂಜಾರಿ, ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಖಜಾಂಚಿ ಚಂದ್ರಹಾಸ ಕಟ್ಟಪುಣಿ, ಅಶೋಕ್‌ ತಂದೊಳಿಗೆ, ಬ್ರಿಜೇಶ್‌ ಗರೋಡಿ, ರಾಮಚಂದ್ರ ಸುವರ್ಣ, ರಿತೇಶ್‌ ನಾಗುರಿ, ಸಂದೀಪ್‌ ದೆಂಜ, ರಾಜೇಶ್‌ ಸಾಲ್ಯಾನ್‌ ಮರೋಳಿ ಮೊದಲಾದವರು ಉಪಸ್ಥಿತರಿದ್ದರು.

ಗರಡಿ ಕ್ಷೇತ್ರದ ಅರ್ಚಕರಾದ ವಾಸು  ದೇವ ಶಾಂತಿ, ಗಂಗಾಧರ ಶಾಂತಿ, ಪೂವಪ್ಪ
ಶಾಂತಿ ಧಾರ್ಮಿಕ ವಿ ಧಿ ವಿಧಾನವನ್ನು ನೆರವೇರಿಸಿಕೊಟ್ಟರು. ಅನೇಕ ಸಂಖ್ಯೆಯಲ್ಲಿ ಭಕ್ತಾದಿಗಳು ನೇರೆದಿದ್ದರು.

LEAVE A REPLY

Please enter your comment!
Please enter your name here