ಉಡುಪಿ: ಮಂಗಳ ದ್ರವ್ಯಗಳಲ್ಲಿ ಒಂದಾದ ಗಾಜಿನ ಬಳೆ ಸೌಂದರ್ಯದ ಪ್ರತೀಕ ಮಾತ್ರವಲ್ಲ ಸೌಭಾಗ್ಯದ ಪ್ರತೀಕವೂ ಹೌದು. ಸೋಣೆ ಮಾಸದಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಗಾಜಿನ ಬಳೆಯನ್ನು ತೊಡಿಸಿ ಸಿಂಗರಿಸುವುದು ಸಾಂಪ್ರದಾಯಿಕವಾಗಿ ಹಿರಿಯರು ಅನುಸರಿಸಿಕೊಂಡು ಬಂದ ಪದ್ಧತಿಗಳಲ್ಲಿ ಒಂದು.
ಪ್ರಕೃತಿಯಲ್ಲಿನ ನಕಾರಾತ್ಮಕ ಅಂಶಗಳನ್ನು ಹೊಡೆದೋಡಿಸಿ ಸಕಾರಾತ್ಮಕ ಅಂಶಗಳನ್ನು ದೇಹದಲ್ಲಿ ತುಂಬಿಸಿ ಚೈತನ್ಯವನ್ನು ಸೂಸುವ ಈ ಗಾಜಿನ ಬಳೆ ತನ್ನದೇ ಆದಂತಹ ವೈಶಿಷ್ಟéವನ್ನು ಹೊಂದಿದೆ. ಅಂತಹ ಸಿಂಗಾರವನ್ನು ದೇವರಿಗೆ ಮಾಡಿಸಿ ಭಕ್ತಿಯ ಪರಾಕಾಷ್ಠೆಯನ್ನು ಭಕ್ತರೊಬ್ಬರು ಮೆರೆದಿದ್ದಾರೆ .
ದೊಡ್ಡಣ್ಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ದುರ್ಗಾ ಆದಿಶಕ್ತಿ ದೇವಿಗೆ ಭಕ್ತರೊಬ್ಬರು ಹರಸಿಕೊಂಡಂತೆ ಸೋಣ ತಿಂಗಳಲ್ಲಿ ಗಾಜಿನ ಬಳೆಗಳಿಂದ ಸಂಪೂರ್ಣವಾಗಿ ಅಲಂಕರಿಸಿ ತಮ್ಮ ಹರಕೆಯನ್ನು ಸಲ್ಲಿಸಿದ್ದಾರೆ. ಈ ವಿಶೇಷ ಅಲಂಕಾರವನ್ನು ಕ್ಷೇತ್ರದ ಆನಂದ ಬಾಯರಿ ಹಾಗೂ ಪ್ರಧಾನ ಅರ್ಚಕ ದಾಮೋದರ ಭಟ್ ನೆರವೇರಿಸಿದ್ದಾರೆ.