Home ಧಾರ್ಮಿಕ ಸುದ್ದಿ ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನ

ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನ

ಬಾಲಾಲಯ ಪ್ರತಿಷೆ; ಜೀರ್ಣೋದ್ಧಾರ ಕಾರ್ಯಗಳಿಗೆ ಚಾಲನೆ

1697
0
SHARE

ಕಾಣಿಯೂರು: ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿರುವ ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಅ. 12ರಂದು ಬಾಲಾಲಯ ಪ್ರತಿಷ್ಠೆ ನಡೆಯಿತು. ಅರ್ಚಕರಾದ ಸುಬ್ರಹ್ಮಣ್ಯ ಉಪಾಧ್ಯಾಯ ಬೊಬ್ಬೆಕೇರಿ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನದೊಂದಿಗೆ ಬಾಲಾಲಯ ಪ್ರತಿಷ್ಠೆ ನೆರವೇರಿಸಲಾಯಿತು.

ಪ್ರಾರ್ಥನೆ, ಸರ್ಪಸಂಸ್ಕಾರ, ಆಶ್ಲೇಷಾ ಬಲಿ, ವನದುರ್ಗಾ ಹೋಮ, ತಿಲಹೋಮ, ವಾಸ್ತುಬಲಿ, ಗಣಪತಿ ಹೋಮ, ಶ್ರೀ ಅಮ್ಮನವರ ದೇವರ ಸಂಕೋಚ ಹಾಗೂ ಬಾಲಾಲಯ ಪ್ರತಿಷ್ಠೆ ನಡೆಸಲಾಯಿತು.

ಉಡುಪಿ ಶ್ರೀ ಕಾಣಿಯೂರು ಮಠದ ದಿವಾನ ರಘುಪತಿ ಆಚಾರ್ಯ ಉಡುಪಿ, ಕಾಣಿಯೂರು ಶ್ರೀ ಮಠದ ವ್ಯವಸ್ಥಾಪಕ ನಿರಂಜನ್‌ ಆಚಾರ್‌, ಕಾಣಿಯೂರು ಶ್ರೀ ಮಠದ ಅರ್ಚಕ ಬಾಲಕೃಷ್ಣ ಆಸ್ರಣ್ಣ ಉಪಸ್ಥಿತರಿದ್ದರು. ದೇಗುಲದ ಜೀರ್ಣೋದ್ಧಾರ ಕಾರ್ಯಗಳಿಗೆ ಚಾಲನೆ ನೀಡಲಾಯಿತು.

ಕಾಣಿಯೂರು ಶ್ರೀ ಮಠದ ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿಯವರ ಮಾರ್ಗ ದರ್ಶನದಂತೆ ಕಾಣಿಯೂರಿನ ಶ್ರೀ ಅಮ್ಮನವರ ದೇವಸ್ಥಾನವನ್ನು ಪುನರ್‌ ನಿರ್ಮಾಣ ಮಾಡಬೇಕೆಂದು ಸಂಕಲ್ಪ ಮಾಡಿದ್ದು, ಗರ್ಭಗುಡಿ, ಮುಖಮಂಟಪ ಹಾಗೂ ಉತ್ತರದ ಗೋಪುರ ಹಾಗೂ ಅಂಗಣ
ಕಾಂಪೌಂಡ್‌ ನಿರ್ಮಾಣವಾಗಲಿದೆ.

ಸುಮಾರು 40 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿದ್ದು, 2020ರ ಫೆಬ್ರವರಿಯಲ್ಲಿ ನಡೆಯುವ ಕಾಣಿಯೂರು ಜಾತ್ರೆಯ ಒಳಗೆ ಶ್ರೀ ದೇವರ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶ ನಡೆಯಲಿದೆ ಎಂದು ಮಠದ ವ್ಯವಸ್ಥಾಪಕ ನಿರಂಜನ್‌ ಆಚಾರ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here