Home ಧಾರ್ಮಿಕ ಕಾರ್ಯಕ್ರಮ ಶ್ರೀದುರ್ಗಾ ನಮಸ್ಕಾರ ಪೂಜೆ

ಶ್ರೀದುರ್ಗಾ ನಮಸ್ಕಾರ ಪೂಜೆ

ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನ

2015
0
SHARE
ಕಪಿಲೇಶ್ವರ ದೇವಸ್ಥಾನದಲ್ಲಿ ಆಟಿ ತಿಂಗಳ ಶ್ರೀದುರ್ಗಾ ನಮಸ್ಕಾರ ಪೂಜೆ ನಡೆಯಿತು.

ಕಾಣಿಯೂರು: ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಆಟಿ ತಿಂಗಳ ವಿಶೇಷ ಶ್ರೀ ದುರ್ಗಾ ನಮಸ್ಕಾರ ಪೂಜೆ ಜು. 19ರಿಂದ ಪ್ರತೀ ದಿನ ನಡೆಯಿತು.

ಪ್ರತಿನಿತ್ಯ ರಾತ್ರಿ ನಡೆದ ವಿಶೇಷ ಭಜನ ಕಾರ್ಯಕ್ರಮದಲ್ಲಿ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನ ಮಂಡಳಿ, ಮುಗೇರು ಮಹಾವಿಷ್ಣು ಭಜನ ಮಂಡಳಿ ಸವಣೂರು, ಸವಣೂರು ಪೆರಿಯಡ್ಕ ಶ್ರೀ ವಿಷ್ಣು ಭಜನ ಮಂಡಳಿ, ವಿಷ್ಣುಪ್ರಿಯಾ ಭಜನ ಮಂಡಳಿ ಬೆಳಂದೂರು ಸಹಿತ ಹಲವು ಭಜನ ಮಂಡಳಿಗಳ ಸದಸ್ಯರು ಭಾಗವಹಿಸಿದ್ದರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ| ಧರ್ಮಪಾಲ ಕರಂದ್ಲಾಜೆ, ಸದಸ್ಯರಾದ ಮಾರಪ್ಪ ಶೆಟ್ಟಿ ದೋಳ್ಪಾಡಿ, ರವೀಂದ್ರ ಮರಕ್ಕಡ, ನೀಲಮ್ಮ ಕಜೆ, ಮೋನಪ್ಪ ಪೂಜಾರಿ, ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ, ಬಾಲಕೃಷ್ಣ ರೈ, ಬೈಲುವಾರು ಪಂಗಡದ ಅಧ್ಯಕ್ಷ ಪುರುಷೋತ್ತಮ ಗೌಡ ಇಡ್ಯಡ್ಕ, ಪದ್ಮನಾಭ ಪೊನ್ನೆತ್ತಡಿ, ಜಯಂತ ವೈ. ಎಣ್ಮೂರು, ಜನಾರ್ದನ ಮಾಸ್ತರ್‌ ಇಡ್ಯಡ್ಕ, ಪರಮೇಶ್ವರ ಭಟ್, ಮಹೇಶ್‌ ಭಟ್, ಕರುಣಾಕರ್‌ ರೈ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here