Home ಧಾರ್ಮಿಕ ಸುದ್ದಿ ಕಂಗಣಬೆಟ್ಟು ದೈವಸ್ಥಾನ: ಕಾಲಾವಧಿ ಕೋಲ

ಕಂಗಣಬೆಟ್ಟು ದೈವಸ್ಥಾನ: ಕಾಲಾವಧಿ ಕೋಲ

1142
0
SHARE

ಮಲ್ಪೆ : ಕೊಡವೂರು ಗ್ರಾಮದ ಕಂಗಣಬೆಟ್ಟು ಶ್ರೀ ವಾಸುಕಿ ನಾಗಬ್ರಹ್ಮ ಸಿರಿಗಳು ಮತ್ತು ಶ್ರೀ ಸ್ವಾಮೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನ ಟ್ರಸ್ಟ್‌ನ ಕಾಲಾವಧಿ ಕೋಲವು ಶನಿವಾರ ನಡಸೆಯಿತು. ಬೆಳಗ್ಗೆ ವೇ. ಮೂ. ಪುತ್ತೂರು ಹಯವದ ತಂತ್ರಿಗಳ ನೇತೃತ್ವದಲ್ಲಿ ನವಕ ಪ್ರಧಾನ ಹೋಮ, ಕಲಶಾಭಿಷೇಕ, ಪಂಚಾಮೃತಾಭಿಷೇಕ ನಡೆದು ಮಧ್ಯಾಹ್ನ ಮಹಾಅನ್ನಸಂತರ್ಪಣೆ ಜರಗಿತು. ಸಂಜೆ 7ಕ್ಕೆ ಭಂಡಾರ ಇಳಿದು, ರಾತ್ರಿ ಸಿರಿಗಳಲ್ಲಿ ರಂಗಪೂಜೆಯಾಗಿ ಬಳಿಕ ಶ್ರೀದೈವದ ನೇಮವು ನಡೆಯಿತು.

ದೈವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಟಿ. ರಾಘವೇಂದ್ರ ರಾವ್‌, ಉಪಾಧ್ಯಕ್ಷ ಸಂತೋಷ ಶೆಟ್ಟಿ ಪಂಚರತ್ನಾ ಪ್ಯಾರಡೈಸ್‌, ಕೋಶಾಧಿಕಾರಿ ರಮೇಶ್‌ ಬಂಗೇರ, ಕಾರ್ಯದರ್ಶಿ ದಿನೇಶ್‌
ಶೆಟ್ಟಿಗಾರ್‌, ರಾಜು ಶೆಟ್ಟಿ, ಜಗನ್ನಾಥ್‌ ಶೆಟ್ಟಿ, ಮುರಳೀಧರ ಆಚಾರ್ಯ, ವಾಸು ಸನೀಲ್‌, ಸತೀಶ್‌ ಶೆಟ್ಟಿ, ಪ್ರಶಾಂತ್‌ ಆಚಾರ್ಯ, ರಮೇಶ್‌ ಶೆಟ್ಟಿ, ನವೀನ್‌ ಶೆಟ್ಟಿ, ಅಶೋಕ್‌
ಆಚಾರ್ಯ, ಹರೀಶ್‌ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here