ಮಲ್ಪೆ : ಕೊಡವೂರು ಕಂಗಣಬೆಟ್ಟು ಶ್ರೀ ವಾಸುಕೀ ನಾಗಬ್ರಹ್ಮ ಅಬ್ಬಗದಾರಗ ಸಿರಿಗಳು ಮತ್ತು ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಲ್ಲಿ ಅಣ್ಣಪ್ಪ ಗುಡಿಯ ಮೂಡು ದಿಕ್ಕಿನಲ್ಲಿ ಅಣ್ಣಪ್ಪ ನೇರವಾಗಿ ಕಂಗಣಬೆಟ್ಟಿಗೆ ಬಂದಿರುವುದಕ್ಕೆ ನೈಜ ಕುರುಹಾಗಿರುವ ಅಣ್ಣಪ್ಪನ ಪಾದದ ಕಟ್ಟೆಯ ಆಲಯ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಮೇ 13ರಂದು ನಡೆಯಿತು.
ವಾಸ್ತುತಜ್ಞ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಅವರ ಮಾರ್ಗದರ್ಶನದಲ್ಲಿ, ವೇ| ಮೂ| ಹಯದವನ ತಂತ್ರಿಗಳ ಪೌರೋಹಿತ್ಯಾದಲ್ಲಿ ಶಿಲಾನ್ಯಾಸ ಜರಗಿತು. ದೈವಸ್ಥಾನ ಟ್ರಸ್ಟ್ನ ಅಧ್ಯಕ್ಷ ಟಿ. ರಾಘವೇಂದ್ರ ರಾವ್, ಕಾರ್ಯದರ್ಶಿ ದಿನೇಶ್ ಶೆಟ್ಟಿಗಾರ್, ಕೋಶಾಧಿಕಾರಿ ರಮೇಶ್ ಬಂಗೇರ, ಸಂತೋಷ್ ಶೆಟ್ಟಿ ಪಂಚರತ್ನ, ರಾಜ ಶೆಟ್ಟಿ, ಜಗನ್ನಾಥ ಶೆಟ್ಟಿ, ಮುರಳೀಧರ ಆಚಾರ್ಯ, ಜಗದೀಶ್ ಶೆಟ್ಟಿ, ಜಯಕರ ಸಾಲ್ಯಾನ್, ವಾಸು ಸನಿಲ್, ಪ್ರಶಾಂತ್ ಆಚಾರ್ಯ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.