ಬಸ್ರೂರು: ಈ ಜಗತ್ತು ಸೃಷ್ಟಿಕರ್ತನ ಆದೇಶದಂತೆ ನಡೆಯುತ್ತದೆ. ದೈವಲೀಲೆ ಇಲ್ಲದೆ ಹುಲ್ಲು ಕಡ್ಡಿಯೂ ಚಲಿಸದು ಎಂದು ಬಾಳ್ಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರು ಆಶೀರ್ವಚನವಿತ್ತರು.
ಕಂದಾವರ ಜಡ್ಡಿನಕೊಡ್ಲುವಿನಲ್ಲಿ ಶ್ರೀ ದುರ್ಗಾಪರಮೇಶ್ವರಿ ಹಾಗೂ ಯಕ್ಷೆ ಮಹಾಕಾಳಿ ದೇವಸ್ಥಾನ ಲೋಕಾರ್ಪಣೆಯ ಸಂದರ್ಭ ಆಶೀರ್ವಚನವಿತ್ತರು.
ಇಲ್ಲಿ ನಿಷ್ಕಾಮ ಭಕ್ತಿ ಮುಖ್ಯ. ಆಡಂಬರದಿಂದ ಯಾವುದೂ ಸಿದ್ದಿಸುವುದಿಲ್ಲ. ನಾವು ದೇವರ ಆಶೀರ್ವಾದ ಪಡೆಯಬೇಕಾದರೆ ಶ್ರದ್ಧೆ ಮತ್ತು ಭಕ್ತಿ ಬೇಕು. ಈ ಹಿನ್ನೆಲೆಯಲ್ಲಿ ಇಲ್ಲಿ ಪ್ರತಿಷ್ಠಾಪಿಸಿದ ದೇವಸ್ಥಾನ ಮಹತ್ವ ಪಡೆಯುತ್ತದೆ ಎಂದರು. ಕಂದಾವರ ಜಡ್ಡಿನಕೊಡ್ಲು ಶ್ರೀನಿವಾಸ ಶೇರೆಗಾರ್ ಮತ್ತು ಕುಟುಂಬದವರು ಉಪಸ್ಥಿತರಿದ್ದರು.