Home ಧಾರ್ಮಿಕ ಸುದ್ದಿ ಕನ್ನರ್ಪಾಡಿ ದೇಗುಲ: ನವರಾತ್ರಿ ಮಹೋತ್ಸವ

ಕನ್ನರ್ಪಾಡಿ ದೇಗುಲ: ನವರಾತ್ರಿ ಮಹೋತ್ಸವ

1250
0
SHARE

ಉಡುಪಿ: ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರೀ ದೇಗುಲದಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವದ ಪ್ರಯುಕ್ತ ದೇವಳವನ್ನು ವಿಶೇಷವಾಗಿ ಹೂವಿನಿಂದ ಅಲಂಕರಿಸಲಾಯಿತು.

ಲಲಿತಾ ಪಂಚಮಿಯಂದು ವಿಶೇಷ ಪೂಜೆ, ಚಂಡಿಕಾಯಾಗ, ರಾತ್ರಿ ಕಲ್ಪೋಕ್ತ ಪೂಜೆ, ರಾತ್ರಿ ಪೂಜೆ, ಚಂದ್ರಮಂಡಲ ರಥೋತ್ಸವ, ಪಲ್ಲಕ್ಕಿ ಸೇವೆ, ರಂಗಪೂಜೆ ನಡೆಯಿತು. ಮಧ್ಯಾಹ್ನ ಹಾಲು ಪಾಯಸ ಸಹಿತ ಮಹಾ ಅನ್ನಸಂತರ್ಪಣೆ ನೆರೆವೇರಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಸ್ವಾತಿ ಎಂ. ಭಟ್‌ ಮತ್ತು ಶಿಷ್ಯೆಯರಿಂದ ಸಂಗೀತ ಕಾರ್ಯಕ್ರಮ, ಸಂಜೆ ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿಯಿಂದ “ಮಹಾಮಂತ್ರಿ ದುಷ್ಟಬುದ್ಧಿ’ ಯಕ್ಷಗಾನ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here